ಟೆಕ್ಕಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ
Wednesday, July 19, 2023
ಬೆಂಗಳೂರು: ನಗರದ ಜೋಗುಪಾಳ್ಯ ಎಂಬಲ್ಲಿ ಟೆಕ್ಕಿಯೊಬ್ಬರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ದಿವ್ಯಾ (30) ಮೃತಪಟ್ಟ ದುರ್ದೈವಿ.
2014ರಲ್ಲಿ ದಿವ್ಯಾ ವಿವಾಹವಾಗಿದೆ. ಆದರೆ ಪತಿ ಹಾಗೂ ಆತನ ಕುಟುಂಬಸ್ಥರು ಮಾನಸಿಕ ಕಿರುಕುಳ ನೀಡುತ್ತಾರೆಂದು ಆರೋಪ ಕೇಳಿ ಬಂದಿತ್ತು. ಸೋಮವಾರ ದಿವ್ಯಾ ಪತಿ ಅರವಿಂದ್ ಆಕೆಯ ತವರುಮನೆಗೆ ಕರೆ ಮಾಡಿ 'ದಿವ್ಯಾ ಕೋಣೆಯೊಳಗಿಂದ ಲಾಕ್ ಮಾಡಿಕೊಂಡಿದ್ದಾಳೆ. ಎಷ್ಟು ಕರೆದರೂ ಬಾಗಿಲು ತೆಗೆಯುತ್ತಿಲ್ಲ' ಎಂದು ಮಾಹಿತಿ ನೀಡಿದ್ದಾನೆ. ವಿಚಾರ ತಿಳಿದು ಅವರು ಪುತ್ರಿ ಮನೆಗೆ ದೌಡಾಯಿಸಿದ್ದಾರೆ. ಕುಟುಂಬಸ್ಥರು ಬರುವ ವೇಳೆಗೆ ದಿವ್ಯಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪತಿ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಮೃತಳ ಪೋಷಕರು ಕೊಲೆ ಆರೋಪ ಮಾಡಿದ್ದಾರೆ. ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ಪತಿ ಅರವಿಂದನನ್ನು ವಶಕ್ಕೆ ಪಡೆದಿದ್ದಾರೆ.