-->
ಬ್ಯಾಂಕ್ ಸಾಲ ಮರುಪಾವತಿ ಮಾಡಲಾಗದೆ ಸತ್ತಂತೆ ನಟಿಸಿದ ಬಿಎಸ್ಎಫ್ ಯೋಧ

ಬ್ಯಾಂಕ್ ಸಾಲ ಮರುಪಾವತಿ ಮಾಡಲಾಗದೆ ಸತ್ತಂತೆ ನಟಿಸಿದ ಬಿಎಸ್ಎಫ್ ಯೋಧ


ಹಿಮಾಚಲ ಪ್ರದೇಶ: ಆನ್​ಲೈನ್​ ಗೇಮ್ ಆಡಲು ಬ್ಯಾಂಕ್  ಸಾಲ ಪಡೆದಿರುವುದನ್ನು ತೀರಿಸಲಾಗದೆ ಗಡಿ ಭದ್ರತಾ ಪಡೆಯ ಸಿಬ್ಬಂದಿ ತನ್ನನ್ನು ಸತ್ತಂತೆ ಬಿಂಬಿಸಿ ಪೊಲೀಸ್ ಅತಿಥಿಯಾಗಿರುವ ಘಟನೆ ಹಿಮಾಚಲಪ್ರದೇಶದ ಚಂಬಾ ಜಿಲ್ಲೆಯಲ್ಲಿ ನಡೆದಿದೆ.

ಅಮಿತ್​ ರಾಣಾ(32) ಬಂಧಿತ ಬಿಎಸ್ಎಫ್ ಸಿಬ್ಬಂದಿ. 

ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಚಂಬಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿಷೇಕ್​ ಯಾದವ್​ ಅವರು, ಅಮಿತ್​ ರಾಣಾ ಆನ್​ಲೈನ್​ ಗೇಮಿಂಗ್​ಗೆ ವ್ಯಸನಿಯಾಗಿದ್ದ. ಈ ಸಲುವಾಗಿ ಬ್ಯಾಂಕ್​ನಿಂದ 45 ಲಕ್ಷ ರೂ. ಸಾಲ ಪಡೆದಿದ್ದ. ಇದನ್ನು ತೀರಿಸದೆ ಬ್ಯಾಂಕ್​ ಸಿಬ್ಬಂದಿಗೆ ಆಟವಾಡಿಸುತ್ತಿದ್ದರು ಎಂದು ತಿಳಿದು ಬಂದಿದೆ.

ಬ್ಯಾಂಕ್​ನವರು ಸಾಲ ತೀರಿಸುವಂತೆ ದುಂಬಾಲು ಬಿದ್ದಿದ್ದಾರೆ. ಇದರಿಂದ ಪೇಚಿಗೆ ಸಿಲುಕಿದ್ದ ಅಮಿತ್​ ಅದರಿಂದ ಪಾರಾಗಲು ಒಂದು ಸಂಚು ರೂಪಿಸಿದ್ದಾನೆ. ಅದರಂತೆ ಮಾಡಿ ಎಸ್ಕೇಪ್​ ಆಗಲು ಯತ್ನಿಸಿದ್ದಾರೆ. ಜೂನ್​ 29ರಂದು ಅಮಿತ್​ ಚಂಬಾ ಚೋವಾರಿ ರಸ್ತೆಯಲ್ಲಿ ಕಾರನ್ನು ನಿಲ್ಲಿಸಿ ಅದರೊಳಗೆ ಸತ್ತ ಮನುಷ್ಯನ ಮೂಲೆಗಳನ್ನಿಟ್ಟು ಸುಟ್ಟು ಹಾಕಿದ್ದಾನೆ. ಇದನ್ನು ನೋಡಿದ ಸ್ಥಳೀಯರೊಬ್ಬರು ಅಧಿಕಾರಿಗಳಿಗೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸಿದ್ದರು. ಕಾರಿನ ಮಾಲೀಕರ ಕುರಿತು ವಿಚಾರಿಸಿದಾಗ ಅಮಿತ್​ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿತ್ತು. ಆತನ ಕುಟುಂಬಸ್ಥರು ಸಹ ಕಾರು ಹಾಗೂ ಮೃತದೇಹವನ್ನು ನೋಡಿ ಇದು ಅಮಿತ್​ರವರದ್ದೆ ಎಂದು ದೃಢಪಡಿಸಿದ್ದರು.

ಬಳಿಕ ಬಿಎಸ್ಎಫ್ ಗೆ ತಿಳಿಸಿ ಇದು ಕೊಲೆಯೋ, ಆತ್ಮಹತ್ಯೆಯೋ, ಆಕಸ್ಮಿಕವೋ ಎಂದು ಕುಟುಂಬದವರು ಶಂಕಿಸಿ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ. ಆದ್ದರಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ರೋಚಕ ತಿರುವು ಬಯಲಾಗಿದೆ. ಮೊದಲಿಗೆ ಘಟನೆ ನಡೆದ ಸ್ಥಳದ ಸುತ್ತ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದ್ದಾರೆ. ಆಗ ಆತ ಸತ್ತಂತೆ ನಾಟಕವಾಡಿರುವುದು ಬಯಲಾಗಿದೆ. ಬಳಿಕ ಅಮಿತ್​ ಚಂಬಾ ಬಸ್​ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು ಘಟನೆ ನಡೆದ ಸ್ಥಳಕ್ಕೂ ಅವರ ಮನೆಗೂ ಕೂಗಳತೆ ಅಂತರವಿದೆ.

ಬಳಿಕ ಅಮಿತ್​ ಕುಟುಂಬಸ್ಥರನ್ನು ಈ ಕುರಿತು ವಿಚಾರಿಸಿ ಆತನ ಅಷ್ಟು ನಂಬರ್​ಗಳನ್ನು ಪಡೆದುಕೊಂಡಾಗ ಆತ ದಕ್ಷಿಣ ಭಾರತದಲ್ಲಿ ಅಡಗಿರುವುದು ಬೆಳಕಿಗೆ ಬಂದಿದೆ. ಬಳಿಕ ಅಧಿಕಾರಿಗಳ ತಂಡ ದಕ್ಷಿಣ ಭಾರತಕ್ಕೆ ತೆರಳಿ ಆತ ಬೆಂಗಳೂರು-ಚೆನ್ನೈ ನಡುವೆ ಲಾರಿಯೊಂದರಲ್ಲಿ ಸಂಚರಿಸುತ್ತಿದ್ದ ವೇಳೆ ಬಂಧಿಸಿದ್ದಾರೆ.

ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಆತ ಸಾಲ ತೀರಿಸಲಾಗದೇ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು ಕಾರಿನಲ್ಲಿ ಸಿಕ್ಕ ಮೂಲೆಗಳು ಮನುಷ್ಯನದ್ದೋ ಅಥವಾ ಪ್ರಾಣಿಯದ್ದೊ ಎಂಬುದರ ಕುರಿತು ಶೋಧಿಸಲಾಗುತ್ತಿದೆ ಎಂದು ಚಂಬಾ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಅಭಿಷೇಕ್​ ಯಾದವ್​ ತಿಳಿಸಿದ್ದಾರೆ.



Ads on article

Advertise in articles 1

advertising articles 2

Advertise under the article