ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಮಿತಿಯ ಸಭೆ
ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಮಿತಿಯ ಸಭೆ
ಕೆನರಾ ಬ್ಯಾಂಕ್ ಪ್ರಾಯೋಜಿತ ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ, ಮಂಗಳೂರು ಇದರ ಸ್ಥಳೀಯ ಮೇಲುಸ್ತುವಾರಿ ಸಮಿತಿ ಸಭೆ ಕೆನರಾ ಬ್ಯಾಂಕ್ ಹಂಪನಕಟ್ಟೆ ll ಇಲ್ಲಿನ ಕಾನ್ಫರೆನ್ಸ್ ಹಾಲ್ ನಲ್ಲಿ ಇತ್ತೀಚೆಗೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಶ್ರೀಮತಿ ಕವಿತಾ ಎನ್.ಶೆಟ್ಟಿ ಲೀಡ್ ಬ್ಯಾಂಕ್ ಚೀಫ್ ಮ್ಯಾನೇಜರ್ ದಕ್ಷಿಣ ಕನ್ನಡ ಇವರು ವಹಿಸಿದ್ದರು.
ಹಣಕಾಸು ಸಾಕ್ಷರತಾ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಡೆಸುವ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ಶ್ರೀ ಪುಷ್ಪರಾಜ್ ಹೆಗ್ಡೆ ನಿವೃತ್ತ ಆಸ್ಸಿಟೆಂಟ್ ಜನರಲ್ ಮ್ಯಾನೇಜರ್ ಕೆನರಾ ಬ್ಯಾಂಕ್, ಶ್ರೀ ಮನೋಹರ ಶೆಟ್ಟಿ ಕಾರ್ಯದರ್ಶಿ ರಾಜ್ಯ ರೈತ ಸಂಘ ಹಸಿರು ಸೇನೆ, ಶ್ರೀ ಸುಬ್ರಹ್ಮಣ್ಯ ವ್ಯವಸ್ಥಾಪಕರು ಸಂಜೀವಿನಿ ಮಂಗಳೂರು, ಶ್ರೀಮತಿ ತಾರಾ ರಾವ್ ವಿಶ್ರಾಂತ ಪ್ರಾಂಶುಪಾಲರು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಬಲ್ಮಠ,ಶ್ರೀ ಜೀವನ್ ಕೊಲ್ಯ ವ್ಯವಸ್ಥಾಪಕರು ಭಾರತೀಯ ವಿಕಾಸ ಟ್ರಸ್ಟ್, ದಿಯಾ ,ಹಣಕಾಸು ಸಮಾಲೋಚಕರಾದ ಶ್ರೀಮತಿ ವೈಶಾಲಿ ಎಸ್ ಗಟ್ಟಿ ಮತ್ತು ಶ್ರೀ ಲತೇಶ್.ಬಿ ಸಭೆಯಲ್ಲಿ ಭಾಗವಹಿಸಿದ್ದರು.