-->
ಮಂಗಳೂರಿನಲ್ಲಿ ಶೋರೂಂ ಗೆ ನುಗ್ಗಿ ಕಾರನ್ನೆ‌ ಕಳವು ಮಾಡಿದ್ರು- ಸಿಕ್ಕಿಬಿದ್ದ ಇಬ್ಬರಲ್ಲಿ ಒಬ್ಬ ಅಪ್ರಾಪ್ತ - CCTV VIDEO

ಮಂಗಳೂರಿನಲ್ಲಿ ಶೋರೂಂ ಗೆ ನುಗ್ಗಿ ಕಾರನ್ನೆ‌ ಕಳವು ಮಾಡಿದ್ರು- ಸಿಕ್ಕಿಬಿದ್ದ ಇಬ್ಬರಲ್ಲಿ ಒಬ್ಬ ಅಪ್ರಾಪ್ತ - CCTV VIDEO


ಮಂಗಳೂರು;  ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂ ನಲ್ಲಿ ಇಬ್ಬರು ಸೇರಿ ಎರಡು ಕಾರು ಕಳವು ಮಾಡಿದ ಪ್ರಕರಣ ಜುಲೈ 12 ರಂದು ನಡೆದಿತ್ತು. ಈ  ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದು, ಇದರಲ್ಲಿ ಓರ್ವ ಬಾಲಕನಾಗಿದ್ದಾನೆ.




ಅಪ್ರಾಪ್ತ ಬಾಲಕ ಮತ್ತು ಮಂಗಳೂರು ತಾಲೂಕಿನ ಕಿನ್ನಿಪದವು ನಿವಾಸಿ  ಮಹಮ್ಮದ್ ಶಫೀಕ್ ಯಾನೆ ಶಫೀಕ್ (21)  ಬಂಧಿತರು


ಜುಲೈ 12 ರಂದು ರಾತ್ರಿ  ಹೊಸಬೆಟ್ಟಿನ ಕಾರ್ ಮಾರ್ಟ್ ಎಂಬ ಹೆಸರಿನ ಹಳೆಯ ವಾಹನಗಳ ಖರೀದಿ ಮತ್ತು ಮಾರಾಟದ ಶೋರೂಂಗೆ ದ್ವಿ ಚಕ್ರದಲ್ಲಿ ಬಂದ ಕಳ್ಳರು ಶೋರೂಂನ ಕಛೇರಿಯ ಗ್ಲಾಸ್ ನ ಡೋರ್ ನ್ನು ಸುತ್ತಿಗೆಯಿಂದ ಜಖಂಗೊಳಿಸಿ ಸಂಪೂರ್ಣ ಪುಡಿ ಮಾಡಿ ಒಳಪ್ರವೇಶಿಸಿ ಆರೋಪಿಗಳು ಕಳವು ಮಾಡಿದ್ದರು‌. ಇದರ ಸಿಸಿಟಿವಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಆರೋಪಿಗಳು ಕಛೇರಿಯೊಳಗೆ ಟೇಬಲ್ ಮೇಲೆ ಇದ್ದ ಒನ್ ಪ್ಲಾಸ್ ಮೊಬೈಲ್ ಪೋನ್,  HP ಕಂಪನಿಯ ಲ್ಯಾಪ್ ಟಾಪ್ ಹಾಗೂ HP ಕಂಪನಿಯ ಪ್ರಿಂಟರ್ ಹಾಗೂ ಶೋರೂಂನ ಪಾರ್ಕ್ ನಲ್ಲಿ ನಿಲ್ಲಿಸಿದ ಕ್ರೆಟಾ ಕಾರು ಹಾಗೂ ಸ್ವಿಫ್ಟ್ ಕಾರನ್ನು ಕಳವು ಮಾಡಿಕೊಂಡು ಹೋಗಿದ್ದರು.
 
ಈ ಬಗ್ಗೆ ಕಾರ್ ಮಾರ್ಟ ಮಾಲಕರಾದ ಅಬೀದ್‌ ಅಹಮ್ಮದ್ ಸೂರಲ್ಪಾಡಿ ಇವರು  ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು,  ಪ್ರಕರಣ ದಾಖಲಾಗಿ ಪತ್ತೆ ಕಾರ್ಯವನ್ನು ನಡೆಸಲಾಗಿದೆ.


ಈ ಪ್ರಕರಣದಲ್ಲಿ ಕಳವಾದ ಕಾರುಗಳ ಪತ್ತೆಯ ಬಗ್ಗೆ ವಿಶೇಷ ಕರ್ತವ್ಯದಲ್ಲಿರುವ ಸಮಯದಲ್ಲಿ ಅಪ್ರಾಪ್ತ ಬಾಲಕನಿಂದ ಕಳವಾದ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆಯಲಾಗಿದೆ. ಆತ ನೀಡಿದ ಮಾಹಿತಿಯಂತೆ ಮಂಗಳೂರು ತಾಲೂಕಿನ ಕಿನ್ನಿಪದವು ನಿವಾಸಿ  ಮಹಮ್ಮದ್ ಶಫೀಕ್ ಯಾನೆ ಶಫೀಕ್ (21)  ಎಂಬಾತನು ದ್ವಿ ಚಕ್ರದಲ್ಲಿ ಬರುವಾಗ ಮರಕಡ ಬಸ್‌ ನಿಲ್ದಾಣದ ಬಳಿ ಬಂಧಿಸಲಾಗಿದೆ.

ಆರೋಪಿ ತೋರಿಸಿಕೊಟ್ಟಂತೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿಯಲ್ಲಿ ಕ್ರೆಟಾ ಕಾರನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಸುತ್ತಿಗೆ, ಕೃತ್ಯದ ಸಮಯ ತಲೆಗೆ ಧರಿಸಿದ ಹೆಲ್ಮಟ್ , ಮೈ ಮೇಲೆ ಧರಿಸಿದ ರೈನ್ ಕೋಟ್, ಕೈಗೆ ಧರಿಸಿದ ಗೌಸ್, ಮುಖಕ್ಕೆ ಹಾಕಿದ ಮಾಸ್ಟ್‌ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿ ಮಹಮ್ಮದ್ ಶಫೀಕ್ ಯಾನೆ ಶಫೀಕ್ ನು ಒಂದು ವರ್ಷದ ಹಿಂದೆ ಮೂಡಬಿದ್ರಿ ಠಾಣಾ ವ್ಯಾಪ್ತಿಯ ಕೆಸರುಗದ್ದೆ ಎಂಬಲ್ಲಿ ಮನೆಯಿಂದ ದ್ವಿಚಕ್ರ ವಾಹನ ಕಳತನ ಮಾಡಿದ್ದು, ಇದನ್ನು  ಆತನಿಂದ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡಿರುವ ವಾಹನಗಳ ಒಟ್ಟು ಅಂದಾಜು ಮೌಲ್ಯ ರೂ 15.50 ಲಕ್ಷ ಆಗಿರುತ್ತದೆ. ಆರೋಪಿ ಮಹಮ್ಮದ್ ಶಫೀಕ್ ಯಾನೆ ಶಫೀಕ್ ನನ್ನು  ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು,  ಮೂರು ದಿನಗಳ ವರೆಗೆ ಪೊಲೀಸ್‌ ಕನ್ನಡಿಗೆ ಪಡೆಯಲಾಗಿದೆ.

ಈ ಕಳವು ಪ್ರಕರಣದ ಪತ್ತೆ ಬಗ್ಗೆ ಮಾನ್ಯ ಪೊಲೀಸ್ ಆಯುಕ್ತರಾದ  ಕುಲದೀಪ್ ಕುಮಾರ್ ಜೈನ್ ಐ.ಪಿ.ಎಸ್ ರವರ ಮಾರ್ಗದರ್ಶನದಂತೆ  ಅಂಶು ಕುಮಾರ್ ಐ.ಪಿ.ಎಸ್ ಉಪ ಪೊಲೀಸ್ ಆಯುಕ್ತರು( ಕಾನೂನು & ಸುವ್ಯವಸ್ಥೆ) ಮತ್ತು  ಬಿ.ಪಿ ದಿನೇಶ್ ಕುಮಾರ್ ಉಪ ಪೊಲೀಸ್ ಆಯುಕ್ತರು ( ಅಪರಾಧ & ಸಂಚಾರ) ರವರ ನಿರ್ದೇಶನದಂತ ಮನೋಜ್ ಕುಮಾರ್ ನಾಯ್ಕ ಸಹಾಯಕ ಪೊಲೀಸ್‌ ಆಯುಕ್ತರು ಮಂಗಳೂರು ಉತ್ತರ ಉಪ ವಿಭಾಗರವರ ಮಾರ್ಗದರ್ಶನದಂತೆ ಸುರತ್ಕಲ್ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಮಹೇಶ್ ಪ್ರಸಾದ್, ರವರ ನೇತೃತ್ವದಲ್ಲಿ ಪಿಎಸ್‌ಐ ಗಳಾದ ರಘು ನಾಯಕ್, ಅರುಣ್ ಕುಮಾರ್, ಎಎಸ್ಐ, ತಾರನಾಥ ಹೆಡ್ ಕಾನ್ಸಟೇಬಲ್ ಗಳಾದ ಅಣ್ಣಪ್ಪ, ಉಮೇಶ್, ಕಾನ್ಸಟೇಬಲ್ ಗಳಾದ ಕಾರ್ತೀಕ್, ಸುನೀಲ್, ಮಂಜುನಾಥ, ನಾಗರಾಜ ಇವರು ಭಾಗವಹಿಸಿರುತ್ತಾರೆ

Ads on article

Advertise in articles 1

advertising articles 2

Advertise under the article