ಈತ ಭಯಾನಕ ಸಾಹಸಿ: ಕ್ರೂರ ಚಿರತೆಯನ್ನೇ ಬೈಕ್ ಹಿಂದಕ್ಕೆ ಕಟ್ಟಿಕೊಂಡು ಅರಣ್ಯ ಇಲಾಖೆಗೊಪ್ಪಿಸಿದ
Friday, July 14, 2023
ಹಾಸನ: ಕ್ರೂರ ಕಾಡುಪ್ರಾಣಿಗಳನ್ನು ಕಂಡರೆ ಹೆದರಿ ಓಡಿ ಹೋಗುವವರೇ ಎಲ್ಲರೂ. ಆದರೆ ಇಲ್ಲೊಬ್ಬನ ಸಾಹಸ ಕಂಡು ಎಲ್ಲರೂ ಬೆರಗಾಗಿ ಹೋಗಿದ್ದಾರೆ. ಈತ ಚಿರತೆಯೊಂದನ್ನು ಹಿಡಿದಿದ್ದಲ್ಲದೆ ಅದನ್ನು ತನ್ನ ಬೈಕ್ ಹಿಂಭಾಗಕ್ಕೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾನೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿವಾಳು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೇಣುಗೋಪಾಲ್ ಅಲಿಯಾಸ್ ಮುತ್ತು ಈ ಸಾಹಸ ಮೆರೆದ ವ್ಯಕ್ತಿ. ಈತ ಚಿರತೆಯನ್ನು ಬೈಕ್ ಹಿಂಬಾಕ್ಕೆ ಕಟ್ಟಿಕೊಂಡು ಹೋಗುತ್ತಿರುವುದನ್ನು ಸ್ಥಳೀಯರು ವೀಡಿಯೋ ಮಾಡಿಕೊಂಡು ಎಲ್ಲೆಡೆ ಹರಿದಾಡಲು ಆರಂಭಿಸಿದೆ.
ವೇಣುಗೋಪಾಲ್ ಬೆಳಗ್ಗೆ ತನ್ನು ಜಮೀನಿಗೆ ಹೋದಾಗ ಚಿರತೆಯೊಂದು ಕಾಣಿಸಿಕೊಂಡಿದೆ. ಆತ ಧೈರ್ಯದಿಂದ ಅದನ್ನು ಎದುರಿಸಿ ಚಿರತೆಯನ್ನು ಹಿಡಿದಿದ್ದಾನೆ. ಹಿಡಿದ ಚಿರತೆಯನ್ನು ಬೈಕ್ ಹಿಂಭಾಗಕ್ಕೆ ಕಟ್ಟಿಕೊಂಡು ಹೋಗಿ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ. ಗಂಡಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದ್ದು, ಚಿರತೆಗೆ ಗಂಡಸಿ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.