ಸಮಸ್ಯೆಯೇ..? ಕುಳಿತಲ್ಲಿಂದಲೇ ಟ್ವೀಟ್ ಮೂಲಕ ದೂರು ನೀಡಿ..!- ಸಿಎಂ ಸಿದ್ದರಾಮಯ್ಯ ಹೊಸ ವ್ಯವಸ್ಥೆ
ಸಮಸ್ಯೆಯೇ..? ಕುಳಿತಲ್ಲಿಂದಲೇ ಟ್ವೀಟ್ ಮೂಲಕ ದೂರು ನೀಡಿ..!- ಸಿಎಂ ಸಿದ್ದರಾಮಯ್ಯ ಹೊಸ ವ್ಯವಸ್ಥೆ
ನಿಮಗೆ ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ದೂರು ನೀಡಬೇಕೆ..? ಹಾಗಿದ್ದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ವ್ಯವಸ್ಥೆ ಕಲ್ಪಿಸಿದ್ದಾರೆ. ಕುಳಿತಲ್ಲಿಂದಲೇ ನೀವು ದೂರು ನೀಡಬಹುದು. ಅದನ್ನು ಸೂಕ್ತ ಇಲಾಖೆಗೆ ಕಳಿಸಿ ಆ ದೂರಿನ ವಿಚಾರಣೆ ನಡೆಸಲಾಗುವುದು.
ಹೌದು, ಇದು ರಾಜ್ಯದ ಜನರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಹೊಸ ವ್ಯವಸ್ಥೆ. ಹಾಗಿದ್ದರೆ, ಆ ಹೊಸ ವ್ಯವಸ್ಥೆ ಏನು ಗೊತ್ತೇ..?
ಈ ದೂರು ಸ್ವೀಕರಿಸಲಿಕ್ಕಾಗಿ ಸಿಎಂ ಹೊಸ ಟ್ವಿಟ್ಟರ್ ಹ್ಯಾಂಡಲ್ ಆರಂಭಿಸಿದ್ದಾರೆ.
@osd_cmkarnataka ಎಂಬ ಟ್ವಿಟ್ಟರ್ ಹ್ಯಾಂಡಲ್ ಆರಂಭಿಸಿದ್ದು, ಜನರು ತಮ್ಮ ನೋವು-ದೂರು ದುಮ್ಮಾನಗಳನ್ನು ಈ ಟ್ವಿಟ್ಟರ್ ಹ್ಯಾಂಡಲ್‌ಗೆ ಟ್ಯಾಗ್ ಮಾಡಬಹುದು.
ಇದನ್ನು ಸೂಕ್ತ ಬಗೆಹರಿಸಲು ಸಿದ್ದರಾಮಯ್ಯ ಆರಂಭಿಸಿದ ದಿಟ್ಟ ಹೆಜ್ಜೆಯಾಗಿದೆ. ಈ ಮೂಲಕ ಜಟಿಲ ಹಾಗೂ ದೀರ್ಘ ಕಾಲ ಬಗೆಹರಿಯದ ಸಮಸ್ಯೆಗಳನ್ನು ಬಗೆಹರಿಸಲು ಸೂಕ್ತ ವೇದಿಕೆ ಕಲ್ಪಿಸಿದಂತಾಗಿದೆ.
ದೂರು ನೀಡುವ ಮಂದಿ ತಮ್ಮ ಹೆಸರು, ವಿಳಾಸ, ಆಧಾರ್ ಸಂಖ್ಯೆ ಮತ್ತು ಅವರು ಮುಂದಿಡುತ್ತಿರುವ ಸಮಸ್ಯೆಗಳ ಸಂಕ್ಷಿಪ್ತ ವಿವರಣೆಯನ್ನು ನೀಡುವಂತೆ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.