ಉಪ್ಪಿನಂಗಡಿ ಯುವಕ ದುಬೈನಲ್ಲಿ ಅನುಮಾನಾಸ್ಪದ ಸಾವು
Thursday, July 6, 2023
ಉಪ್ಪಿನಂಗಡಿ: ಇಲ್ಲಿನ ಯುವಕನೋರ್ವ ದುಬೈನಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಉಪ್ಪಿನಂಗಡಿ ಸಮೀಪದ ಕುಪ್ಪೆಟ್ಟಿ ನಿವಾಸಿ ರಾಝಿಕ್ ಕುಪ್ಪೆಟ್ಟಿ (24) ಮೃತಪಟ್ಟ ಯುವಕ.
ಹೊಟೇಲ್ ಕೊಠಡಿಯಲ್ಲಿ ಮಲಗಿದ್ದ ಇವರು ಬೆಳಗ್ಗೆ ಎದ್ದೇಳದಿರುವುದನ್ನು ಕಂಡು ಹೊಟೇಲ್ ನವರು ಪರಿಶೀಲನೆ ನಡೆಸಿದಾಗ ಅವರು ಮೃತಪಟ್ಟಿರುವುದು ತಿಳಿದು ಬಂದಿದೆ. ಈ ಅಸಹಜ ಸಾವಿನ ಬಗಗೆ ಹಲವಾರು ಅನುಮಾನಗಳು ಹುಟ್ಟಿದೆ. ಇವರು ಕಳೆದ ಸಮಯಗಳ ಹಿಂದೆಯಷ್ಟೇ ಊರಿಗೆ ಬಂದು ವಿವಾಹವಾಗಿದ್ದರು. ಬಳಿಕ ಉದ್ಯೋಗದ ನಿಮಿತ್ತ ಮತ್ತೆ ದುಬೈಗೆ ತೆರಳಿದ್ದರು. ರಾಝಿಕ್ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.