ಉಚಿತ ಬಸ್ ಸೌಲಭ್ಯ: ರಾಜ್ಯದ ಬಡ ಜನರ ಬದುಕಲ್ಲಿ ಹೊಸ ಅರುಣೋದಯ..! ಹೇಗೆ ಗೊತ್ತೇ..?
ಉಚಿತ ಬಸ್ ಸೌಲಭ್ಯ: ರಾಜ್ಯದ ಬಡ ಜನರ ಬದುಕಲ್ಲಿ ಹೊಸ ಅರುಣೋದಯ..! ಹೇಗೆ ಗೊತ್ತೇ..?
ರಾಜ್ಯ ಸರ್ಕಾರದ ಉಚಿತ ಬಸ್ ಸೌಲಭ್ಯ ರಾಜ್ಯದ ಬಡ ಜನತೆಯಲ್ಲಿ ಅದರಲ್ಲೂ ಗ್ರಾಮೀಣ ಜನತೆಯ ಬದುಕಲ್ಲಿ ಹೊಸ ಕ್ರಾಂತಿಯನ್ನೇ ಮಾಡಿಬಿಟ್ಟಿದೆ.
ಕೂಲಿ ನಾಲಿ ಮಾಡುವ ಜನರು ತಮ್ಮ ದಿನನಿತ್ಯದ ದುಡಿಮೆಯ ಹಣದಲ್ಲಿ ಒಂದಷ್ಟು ಪಾಲನ್ನು ಪ್ರಯಾಣಕ್ಕಾಗಿ ಮೀಸಲಿಡುತ್ತಿದ್ದರು. ತರಕಾರಿ, ಹೂವು ಹಣ್ಣು ಮಾರುವ ಹೆಂಗಸರು, ದಿನಗೂಲಿಗೆ ದುಡಿಯುವ ಮಹಿಳೆಯರಿಂದ ಹಿಡಿದು ಬಡ ಕೂಲಿ ಕಾರ್ಮಿಕರ ಕುಟುಂಬದ ಹೆಣ್ಮಕ್ಕಳಿಗೆ ಬಸ್ ಪ್ರಯಾಣದ ವೆಚ್ಚ ಇದೀಗ ಉಳಿತಾಯವಾಗುತ್ತಿದೆ.
ಇದು ನೇರವಾಗಿ ಅವರ ಕುಟುಂಬ ಆರ್ಥಿಕ ಪ್ರಗತಿಗೆ ವ್ಯಯವಾಗುತ್ತಿದೆ. ಇದು ಗ್ರಾಮೀಣ ಮತ್ತು ನಗರ ಭಾಗದ ಮಹಿಳೆಯರ ಪಾಲಿಗೆ ವರವಾಗಿ ಪರಿಣಮಿಸಿದೆ.
ದಿನನಿತ್ಯ ತಮ್ಮ ದೈನಂದಿನ ಹೊಟ್ಟೆಪಾಡಿಗಾಗಿ ಓಡಾಡುವ ಮಹಿಳೆಯರ ಬಸ್ ಖರ್ಚು ಉಳಿತಾಯವಾಗುತ್ತದೆ. ತಿಂಗಳಿಗೆ ಸರಿ ಸುಮಾರು ಮೂರು ಸಾವಿರ ಉಳಿಯುತ್ತದೆ. ಇದು ಮಕ್ಕಳ ಫೀಸ್, ರೇಶನ್ ಮೊದಲಾದ ಕುಟುಂಬದ ಸಣ್ಣ ಪುಟ್ಟ ಖರ್ಚಿಗೆ ಆಗುತ್ತದೆ ಎಂದು ಬಹುತೇಕ ಮಹಿಳೆಯರು ನಗುಮೊಗದಿಂದಲೇ ಶಕ್ತಿ ಯೋಜನೆಯನ್ನು ಶ್ಲಾಘಿಸಿದ್ದಾರೆ.
ಇಲ್ಲಿ ಉಳಿತಾಯವಾಗುವ ಸಣ್ಣ ಮೊತ್ತವೂ ಕುಟುಂಬದ ಪಾಲನೆ-ಪೋಷಣೆಗೆ ವ್ಯಯವಾಗುತ್ತದೆ. ತಮ್ಮ ಕುಟುಂಬಕ್ಕೆ ಹೆಚ್ಚಿನ ಆರ್ಥಿಕ ಬಲ ತುಂಬಿದ ಶಕ್ತಿ ಯೋಜನೆಯನ್ನು ರಾಜ್ಯದ ವಿವಿಧ ಭಾಗದ ಮಹಿಳೆಯರು ಹಾಡಿ ಹೊಗಳಿದ್ಧಾರೆ.
ಬಸ್ ಪ್ರಯಾಣ ಬಿಟ್ಟಿ ಇದೆ ಎಂದ ಮಾತ್ರಕ್ಕೆ ಯಾವ ಮಹಿಳೆಯರೂ ಅನಗತ್ಯವಾಗಿ ಪ್ರಯಾಣ ಮಾಡುವುದಿಲ್ಲ. ಅವರಿಗೂ ಜವಾಬ್ದಾರಿ ಇದೆ. ತಮ್ಮ ಕುಟುಂಬವನ್ನು ಸಲಹುವ ಹೊಣೆಗಾರಿಕೆಯಿಂದ ದುಡಿಯುವ ಮಹಿಳೆಯರು ಸಿದ್ದರಾಮಯ್ಯ ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಮನತುಂಬಿ ಕೃತಜ್ಞತೆ ಅರ್ಪಿಸುತ್ತಿದ್ದಾರೆ.
ಬಿಟ್ಟಿ ಪ್ರಯಾಣ ಎಂದೆಲ್ಲ ಕೆಲವರು ಬೊಬ್ಬೆ ಹಾಕಿದ್ದರು. ಶಕ್ತಿ ಯೋಜನೆಯ ಬಿಟ್ಟಿ ಪ್ರಯಾಣದಿಂದ ರಾಜ್ಯ ಸರ್ವನಾಶವಾಗುತ್ತದೆ, ಶ್ರೀಲಂಕಾದ ಪರಿಸ್ಥಿತಿ ಬರುತ್ತದೆ ಎಂದೆಲ್ಲ ಬೊಬ್ಬೆ ಹಾಕಿದವರು ಇದೀಗ ಇಂಗು ತಿಂದ ಮಂಗನಂತಾಗಿದ್ದಾರೆ. ಸಾರಿಗೆ ಸಂಸ್ಥೆಯ ಬಸ್‌ನತ್ತ ಜನ ಸಾಗರವೇ ಹರಿದುಬರುತ್ತಿದೆ.
ಈ ಯೋಜನೆಯಿಂದಾಗಿ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿದ್ದು, ಕುಟುಂಬಕ್ಕೆ ಆರ್ಥಿಕ ಶಕ್ತಿ ಬರುವ ಜೊತೆಗೆ ಮಾರುಕಟ್ಟೆಯಲ್ಲೂ ನಿಧಾನವಾಗಿ ಮಂದಹಾಸ ಮೂಡುತ್ತಿದೆ. ಇದರ ಪರಿಣಾಮ ರಾಜ್ಯದಲ್ಲಿ ಹೊಸ ರೀತಿಯ ಆರ್ಥಿಕ ಅಭಿವೃದ್ಧಿಗೆ ನಾಂದಿಯಾಗುತ್ತಿದೆ.
ಇದನ್ನೂ ಓದಿ:
ನಷ್ಟದಲ್ಲಿ ಇದ್ದ KSRTC ಲಾಭದತ್ತ!- ಬಲ ಕೊಟ್ಟ ಶಕ್ತಿ ಯೋಜನೆ !
.