ಹೋಮ್ ಸ್ಟೇಯಲ್ಲಿ ಗಾಂಜಾಗಿಡ ಬೆಳೆಸಿದ ಭೂಪ ಅಂದರ್
Tuesday, July 4, 2023
ಮಡಿಕೇರಿ: ಇಲ್ಲಿನ ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಹೋಮ್ ಸ್ಟೇಯಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಭೂಪನನ್ನು ಕೊಡಗು ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ.
ನಲ್ವತ್ತೋಕ್ಲು ಗ್ರಾಮದ ನಿವಾಸಿ ಅಕ್ಷಯ್ (28) ಬಂಧಿತ ಆರೋಪಿ.
ನಲ್ವತ್ತೋಕ್ಲು ಗ್ರಾಮದ ಹೋಂಸ್ಟೇಯೊಂದರಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ಪೊಲೀಸರಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿರುವ ಪೊಲೀಸರು ಸ್ಥಳೀಯ ನಿವಾಸಿ ಅಕ್ಷಯ್ (28) ಎಂಬಾತನ್ನು ಬಂಧಿಸಿದ್ದಾರೆ. ಈ ವೇಳೆ ಹೋಮ್ ಸ್ಟೇಯಲ್ಲಿ ಬೆಳೆಸಿದ್ದ 130 ಗ್ರಾಂ ತೂಕದ ಹಸಿ ಗಾಂಜಾ ಗಿಡವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿರಾಜಪೇಟೆ ಉಪವಿಭಾಗದ ಡಿವೈಎಸ್‌ಪಿ ಆರ್.ಮೋಹನ್ ಕುಮಾರ್, ಸಿಪಿಐ ಬಿ.ಎಸ್.ಶಿವರುದ್ರಪ್ಪ ಪಿಎಸ್‌ಐ ಮಂಜುನಾಥ ಸಿ.ಸಿ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು.