SK ಗವರ್ನ್ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್‌ಗೆ ನಿರ್ದೇಶಕರ ಸ್ಥಾನಕ್ಕೆ ಹೇಮಚಂದ್ರ ನಾಮನಿರ್ದೇಶನ
SK ಗವರ್ನ್ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್‌ಗೆ ನಿರ್ದೇಶಕರ ಸ್ಥಾನಕ್ಕೆ ಹೇಮಚಂದ್ರ ನಾಮನಿರ್ದೇಶನ
ಸೌತ್ ಕೆನರಾ ಗವರ್ನ್ಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕಿನ ತೆರವಾದ ನಿರ್ದೇಶಕರ ಸ್ಥಾನಕ್ಕೆ ಶ್ರೀ ಹೇಮಚಂದ್ರ ಬಿ. ನಾಮನಿರ್ದೇಶನ*
ವೇತನದಾರರ ಸಹಕಾರಿ ಬ್ಯಾಂಕ್ ಗಳ ಪೈಕಿ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿರುವ ಸೌತ್ ಕೆನರಾ ಗವರ್ನಮೆಂಟ್ ಆಫೀಸರ್ಸ್ ಕೋ ಆಪರೇಟಿವ್ ಬ್ಯಾಂಕ್, ಅಮ್ಮೆಂಬಳ ಸುಬ್ಬ ರಾವ್ ಪೈ ರಸ್ತೆ, ಡೊಂಗರಕೇರಿ, ಮಂಗಳೂರು ಇಲ್ಲಿ ತೆರವಾದ ನಿರ್ದೇಶಕರ ಸ್ಥಾನಕ್ಕೆ ಸರ್ವಾನುಮತದಿಂದ ನಾಮ ನಿರ್ದೇಶನಗೊಂಡ ಶ್ರೀ ಹೇಮಚಂದ್ರ ಬಿ. ಇವರನ್ನು ದಿನಾಂಕ 6.7.20323 ರಂದು ಜರಗಿದ ಆಡಳಿತ ಮಂಡಳಿಯ ಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಪ್ರಕಾಶ್ ನಾಯಕ್ ಅವರು ಅಭಿನಂದಿಸಿದರು.
ಬ್ಯಾಂಕಿನ ನಿರ್ದೇಶಕರಾಗಿದ್ದ ಬಂದರು ಇಲಾಖೆಯ ಅಧಿಕಾರಿ ಶ್ರೀ ಎಸ್. ನಿರಂಜನ ಮೂರ್ತಿಯವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಶ್ರೀ ಹೇಮಚಂದ್ರ ಬಿ. ಜಿಲ್ಲಾ ಯೋಜನಾ ಸಮನ್ವಯಾಧಿಕಾರಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ದ.ಕ. ಜಿಲ್ಲೆ, ಇವರನ್ನು ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ನಾಮನಿರ್ದೇಶನ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ತಿಲೋತ್ತಮ, ನಿರ್ದೇಶಕರುಗಳಾದ ಶ್ರೀಮತಿ ಸುಜಾತ, ಶ್ರೀಮತಿ ಶಶಿಕಲಾ, ಶ್ರೀ ಪದ್ಮನಾಭ ಜೋಗಿ, ಶ್ರೀ ಪ್ರದೀಪ್ ಡಿಸೋಜ, ಶ್ರೀ ಅಕ್ಷಯ್ ಭಂಡಾರ್ಕರ್, ಶ್ರೀ ಶಮಂತ್ ಕುಮಾರ್, ಶ್ರೀ ಶಿವಾನಂದ ಎಂ, ಶ್ರೀ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹ, ಶ್ರೀ ಜಗದೀಶ್ ಹಾಗೂ ಬ್ಯಾಂಕಿನ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲಕ್ಷ್ಮೀಶ ಎನ್. ಉಪಸ್ಥಿತರಿದ್ದರು.