ಗ್ರಾಹಕರಿಗೆ ರಾತೋರಾತ್ರಿ ಶಾಕ್ ನೀಡಿದ HDFC: ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಈ ಸುದ್ದಿ!
Saturday, July 8, 2023
ಗ್ರಾಹಕರಿಗೆ ರಾತೋರಾತ್ರಿ ಶಾಕ್ ನೀಡಿದ HDFC: ಬ್ಯಾಂಕಿನಲ್ಲಿ ಸಾಲ ಇದ್ದವರಿಗೆ ಈ ಸುದ್ದಿ
HDFC ತನ್ನ ಗ್ರಾಹಕರಿಗೆ ರಾತೋರಾತ್ರಿ ಶಾಕ್ ನೀಡಿದೆ. ಬ್ಯಾಂಕಿನಲ್ಲಿ ಎಂಸಿಎಲ್‌ಆರ್ ಆಧಾರಿತ ಸಾಲ ಇದ್ದವರು ಈ ಸುದ್ದಿಯನ್ನು ಕಡ್ಡಾಯವಾಗಿ ಓದಲೇಬೇಕು.
ಬ್ಯಾಂಕ್ ತನ್ನ ಗ್ರಾಹಕರಿಗೆ ಸಾಲದ ಮೇಲಿನ ಬಡ್ಡಿದರವನ್ನು ಶೇ. 0.5ರಿಂದ ಗರಿಷ್ಟ 0.15ರ ವರೆಗೆ ಹೆಚ್ಚಳ ಮಾಡಿದೆ. ಇದರಿಂದ ಗ್ರಾಹಕರ ವಾಹನ ಮತ್ತು ವೈಯಕ್ತಿಕ ಸಾಲಗಳು ತುಸು ದುಬಾರಿಯಾಗಲಿದೆ.
ಆಯ್ದ ಕೆಲವು ಅವಧಿಯ ಸಾಲಗಳ ಮೇಲಿನ ಎಂಸಿಎಲ್‌ಆರ್ ಆಧಾರಿತ ಬಡ್ಡಿದರವನ್ನು HDFC Bank ಹೆಚ್ಚಿಸಿದೆ.
ರೆಪೋ ದರಕ್ಕೆ ಹೊಂದಿಕೊಂಡಿರುವ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಇದರಿಂದ ಯಾವುದೇ ವ್ಯತ್ಯಾಸ ಆಗುವುದಿಲ್ಲ.
ಗೃಹ ಸಾಲಗಳು ಎಂಸಿಎಲ್‌ಆರ್‌ಗೆ ಜೋಡಣೆ ಆಗಿರುವುದಿಲ್ಲ. ಆದುದರಿಂದ ಬ್ಯಾಂಕ್ ನ ಈ ತೀರ್ಮಾನವು ಗೃಹ ಸಾಲ ಪಡೆದವರ ಮೇಲೆ ಯಾವುದೇ ಪರಿಣಾಮ ಉಂಟು ಮಾಡುವುದಿಲ್ಲ.