HONEYTRAP: ಕೇರಳ ಕಿರುತೆರೆ ನಟಿ ಬಂಧನ ( VIDEO)
Saturday, July 29, 2023
ತಿರುವನಂತಪುರಂ: ನಿವೃತ್ತ ಯೋಧ ನಿಗೆ HONEYTRAP ಮಾಡಿ 11 ಲಕ್ಷರೂ. ಸುಲಿಗೆ ಮಾಡಿದ್ದ ಆರೋಪದ ಮೇಲೆ ಕೇರಳ ಕಿರುತೆರೆ ನಟಿ ನಿತ್ಯಾಶಶಿ ಹಾಗೂ ಆಕೆಯ ಗೆಳೆಯ ಬಿನು ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
75 ವರ್ಷದ ನಿವೃತ್ತ ಯೋಧ ಕೇರಳ ವಿವಿಯಲ್ಲಿ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ತಿರುವನಂತಪುರದ ಪಟೊಮ್‌ನಲ್ಲಿ ವಾಸವಿದ್ದ ಸಂತ್ರಸ್ತನಿಗೆ ಪರಿಚಯವಾಗಿದ್ದ ನಟಿ ನಿತ್ಯಾಶಶಿ, ಬಾಡಿಗೆ ಮನೆ ಸಂಬಂಧ 2023ರ ಮೇ 24 ರಂದು ಪರಸ್ಪರ ಭೇಟಿಯಾಗಿದ್ದರು.
ಪ್ರತಿದಿನ ಸಂತ್ರಸ್ತ ವ್ಯಕ್ತಿಗೆ ಕರೆ ಮಾಡುವ ಮೂಲಕ ಸಲುಗೆ ಬೆಳೆಸಿದ್ದ ನಿತ್ಯಾಶಶಿ, ಒಮ್ಮೆ ಏಕಾಂತ ಸ್ಥಳದಲ್ಲಿ ಭೇಟಿಯಾಗುತ್ತಾರೆ. ಈ ವೇಳೆ ಬಲವಂತವಾಗಿ ಆತನ ಬಟ್ಟೆ ಬಿಚ್ಚಿಸಿದ್ದಾರೆ. ಮೊದಲೇ ನಿರ್ಧರಿಸಿದಂತೆ ಆಕೆಯ ಸ್ನೇಹಿತ ಬಿನು ಇಬ್ಬರು ಜತೆಯಾಗಿರುವ ವಿಡಿಯೊ, ಪೋಟೊ ತೆಗೆದುಕೊಂಡು ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ.