ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಓದಲೇಬೇಕಾದ ಸುದ್ದಿ..! ಇಲಾಖೆ ಮಹತ್ವದ ಪ್ರಕಟಣೆ
ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರು ಓದಲೇಬೇಕಾದ ಸುದ್ದಿ..! ಇಲಾಖೆ ಮಹತ್ವದ ಪ್ರಕಟಣೆ
ಆದಾಯ ತೆರಿಗೆ ಲೆಕ್ಕಪತ್ರ(Income Tax Returns) ಸಲ್ಲಿಸುವವರು ಆದಾಯ ತೆರಿಗೆ ಇಲಾಖೆ ಮಹತ್ವದ ಪ್ರಕಟಣೆಯನ್ನು ಹೊರಡಿಸಿದ್ದು, ಐಟಿಆರ್ ಸಲ್ಲಿಸುವವರಿಗೆ ಇದು ಮಹತ್ವದ ಸುದ್ದಿಯಾಗಿದೆ.
ಆದಾಯ ತೆರಿಗೆ ಲೆಕ್ಕಪತ್ರ ಸಲ್ಲಿಕೆಗೆ ಈ ತಿಂಗಳು (ಜುಲೈ) 31 ಅಂತಿಮ ದಿನವಾಗಿದೆ. ಹಾಗಾಗಿ, ಎಲ್ಲ ತೆರಿಗೆ ಪಾವತಿದಾರರು ಮತ್ತು ರಿಟರ್ನ್ಸ್ ಸಲ್ಲಿಸುವವರು ಜುಲೈ ಅಂತ್ಯದ ಒಳಗೆ ತಮ್ಮ ಐಟಿಆರ್ ಸಲ್ಲಿಸಬೇಕಾಗಿದೆ.
ಸಾಮಾನ್ಯವಾಗಿ ಸಲ್ಲಿಕೆಗೆ ಕೊನೇ ದಿನದ ಗಡುವನ್ನು ಮುಂದೂಡಲಾಗುತ್ತದೆ. ಆದರೆ, ಈ ಬಾರಿ ಗಡುವನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪ ಇರುವುದಿಲ್ಲ. ಕೊನೇ ದಿನಗಳಲ್ಲಿ ಎಲ್ಲರೂ ಏಕಕಾಲಕ್ಕೆ ಐಟಿಆರ್ ಅಪ್‌ಲೋಡ್ ಮಾಡುವುದರಿಂದ ಸರ್ವರ್ ಕೈಕೊಡಬಹುದು. ಹಾಗಾಗಿ, ಸಾಧ್ಯವಿದ್ದಷ್ಟು ಬೇಗನೆ ತಮ್ಮ ಆದಾಯ ತೆರಿಗೆ ವರದಿಯನ್ನು ಸಲ್ಲಿಸುವಂತೆ ಇಲಾಖೆ ಮನವಿ ಮಾಡಿದೆ.
ಕಳೆದ ವರ್ಷ ಜುಲೈ 31, 2022ರಂದು ಒಂದೇ ದಿನ 5.83 ಕೋಟಿ ಐಟಿಆರ್ ಸಲ್ಲಿಸಲಾಗಿತ್ತು. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಹಳಷ್ಟು ಮಂದಿ ಮುಂಚಿತವಾಗಿಯೇ ತಮ್ಮ ಆದಾಯ ತೆರಿಗೆ ಮಾಹಿತಿಯನ್ನು ಇಲಾಖೆಗೆ ಸಲ್ಲಿಸಿದ್ದಾರೆ.