7.27 ಲಕ್ಷ ಆದಾಯ: ಇನ್‌ಕಂ ಟ್ಯಾಕ್ಸ್ ಪಾವತಿಸಬೇಕಿಲ್ಲ! ಇಲ್ಲಿದೆ ಸಿಂಪಲ್ ಲೆಕ್ಕಾಚಾರ!
7.27 ಲಕ್ಷ ಆದಾಯ: ಇನ್‌ಕಂ ಟ್ಯಾಕ್ಸ್ ಪಾವತಿಸಬೇಕಿಲ್ಲ! ಇಲ್ಲಿದೆ ಸಿಂಪಲ್ ಲೆಕ್ಕಾಚಾರ!
ನಿಮಗೆ 7.27 ಲಕ್ಷದ ವರೆಗೆ ಆದಾಯ ಇದೆಯೇ..? ಹಾಗಿದ್ದರೂ ನೀವು ಆದಾಯ ತೆರಿಗೆ (Income Tax) ಪಾವತಿ ಮಾಡಬೇಕಿಲ್ಲ. ಇದು ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಲೆಕ್ಕಾಚಾರ... ಹೇಗೆ ಗೊತ್ತೇ..? ಇಲ್ಲಿದೆ ಸಿಂಪಲ್ ಲೆಕ್ಕಾಚಾರ !
ಹೊಸ ಆದಾಯ ತೆರಿಗೆ ಪದ್ಧತಿ ಅಡಿಯಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್‌ಗೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ 7.27 ಲಕ್ಷ ಆದಾಯ ಇದ್ದವರೂ ಇನ್‌ಕಂ ಟ್ಯಾಕ್ಸ್ ಪಾವತಿಸಬೇಕಿಲ್ಲ ಎನ್ನುತ್ತಾರೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್.
ಹೊಸ ತೆರಿಗೆ ಪದ್ದತಿ ಆಯ್ಕೆ ಮಾಡಿಕೊಂಡವರಿಗೆ ಸ್ಟ್ಯಾಂಡರ್ಡ್ ಡಿಡಕ್ಷನ್(Standard Deduction)ಗೆ ಅವಕಾಶ ಇಲ್ಲ ಎಂದು ಹೇಳಲಾಗಿತ್ತು. ಆದರೆ, ಈಗ ಅದಕ್ಕು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಸ್ಟ್ಯಾಂಡರ್ಡ್ ಡಿಡಕ್ಷನ್ ಹೊಸ ತೆರಿಗೆ ಪದ್ಧತಿಯ ಭಾಗವಾಗಲಿದೆ- ನಿರ್ಮಲಾ ಸೀತಾರಾಮನ್
ಸ್ಟ್ಯಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ ಯಾವುದೇ ತೆರಿಗೆದಾರರು 50,000 ರೂ. ವರೆಗೆ ಕ್ಲೈಮ್ ಮಾಡಬಹುದು
15.5 ಲಕ್ಷಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ಪ್ರತಿಯೊಬ್ಬ ಸಂಬಳದ ವ್ಯಕ್ತಿ 52,500 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್‌ಗೆ ಅರ್ಹ.