IPHONE ಗಾಗಿ 8 ತಿಂಗಳ ಮಗುವನ್ನು ಮಾರಿದ ದಂಪತಿ!
Saturday, July 29, 2023
ಕೋಲ್ಕೊತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ IPHONE ಖರೀದಿ ಹಾಗೂ ಭೋಗದ ಜೀವನಕ್ಕಾಗಿ ತಮ್ಮ 8 ತಿಂಗಳ ಮಗುವನ್ನೇ ಮಾರಾಟ ಮಾಡಿದ ಆರೋಪದ ಮೇಲೆ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ.
ಜಯದೇವ್ ಘೋಷ್ ಮತ್ತು ಪತ್ನಿ ತಮ್ಮ ಮಗುವನ್ನು ರೂ. 2 ಲಕ್ಷಕ್ಕೆ ಮಾರಾಟ ಮಾಡಿದ್ದಾರೆ. ದಂಪತಿ ಬಳಿ ಸುಮಾರು 1 ಲಕ್ಷ ರೂ. ಮೌಲ್ಯದ ಹೊಚ್ಚಹೊಸ IPHONE -14 ಇರುವುದನ್ನು ಕಂಡು ಹಾಗೂ ಮಗು ಕಾಣೆಯಾಗಿರುವುದನ್ನು ಗಮನಿಸಿದ ಅನುಮಾನಗೊಂಡು ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಅಲ್ಲದೆ, ಮಗು ಮಾರಾಟ ಮಾಡಿದ ಹಣದಲ್ಲಿ ದಂಪತಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದಾರೆ. IPHONE-14 ಖರೀದಿಸಿ, ಹಾಗೂ ಯೂಟ್ಯೂಬ್ ಸ್ಟೋರೀಸ್ ಚಿತ್ರೀಕರಿಸುವ ಉದ್ದೇಶವನ್ನು ದಂಪತಿ ಹೊಂದಿದ್ದರೆಂದು ವಿಚಾರಣೆಯಿಂದ ಬಯಲಾಗಿದೆ.
ಕಳೆದ ತಿಂಗಳು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಹಿತಿಯನ್ನು ಆಧರಿಸಿ ಪೊಲೀಸರು ಮಗುವನ್ನು ರಕ್ಷಿಸಿದ್ದಾರೆ.