ಪೋಲ್‌ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್ ವರ್ಕೌಟ್
Wednesday, July 26, 2023
ಬಾಲಿವುಡ್‌ನಲ್ಲಿ ಜಾಕ್ವೆಲಿನ್ ಫೆರ್ನಾಂಡಿಸ್ ಫಿಟ್ಟೆಸ್ಟ್ ನಟಿ ಅಂತ ಕರೆಸಿಕೊಳ್ಳುತ್ತಾರೆ. ಫಿಟ್ ಆಗಿರುವ ಹೊಟ್ಟೆ ಭಾಗವನ್ನು ತೋರಿಸುವಂತಹ ಫೋಟೊವನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಇವರು ಗಮನ ಸೆಳೆದಿದ್ದರು.
ದೇಹಸಿರಿಗಾಗಿಯೇ ಇವರು ದೇಹದಂಡನೆಗೆ ಪ್ರಾಮುಖ್ಯವನ್ನು ನೀಡುತ್ತಾರೆ. ಅಂದರೆ ನಿಯಮಿತವಾಗಿ ಜಿಮ್‌ನಲ್ಲಿ ದೇಹ ದಂಡಿಸುತ್ತಿರುತ್ತಾರೆ. ನಿತ್ಯವೂ ಯೋಗ ಮಾಡುವುದು ಇವರಿಗೆ ಅಭ್ಯಾಸವಾಗಿದೆ. ಏರಿಯಲ್ ಯೋಗದ ಮೂಲಕ ಆಗಾಗ ಗಮನ ಸೆಳೆಯುತ್ತಿರುತ್ತಾರೆ.
ಅವೆಲ್ಲವನ್ನೂ ಮೀರಿ ಪೋಲ್ ಡಾನ್ಸ್ ಅಂದರೆ ಇವರಿಗೆ ಬಲು ಇಷ್ಟ. ಸತತವಾಗಿ ಪೋಲ್ ಡಾನ್ಸ್ ಮಾಡುವ ಇವರು ಸಾಹಸದ ಮೂಲಕ ಮನೋದೈಹಿಕ ಆರೋಗ್ಯದ ಬಗ್ಗೆ ವಿಶೇಷ ಗಮನವನ್ನು ನೀಡುತ್ತಾರೆ.
ಡಯಟ್ ಬಗ್ಗೆಯೂ ವಿಶೇಷ ಗಮನ ನೀಡುವ ಇವರು ಚಿಕನ್, ಫಿಶ್, ಟೋಫು ಬಳಸುತ್ತಾರಂತೆ. ಕಂದು ಅಕ್ಕಿ, ನವಣೆ ಇವರ ಊಟದಲ್ಲಿ ಹೆಚ್ಚು ಬಳಕೆ ಆಗುತ್ತಿರುತ್ತದೆಯಂತೆ. ಬೆಣ್ಣೆ ಹಣ್ಣು ಹಾಗೂ ಬೀಜಗಳನ್ನು ಸೇವಿಸುವ ಅಭ್ಯಾಸ ಇವರಿಗೆ ಇದೆ. ಹಣ್ಣು ತರಕಾರಿಗಳನ್ನು ಕೇವಲ ಆರೋಗ್ಯಕ್ಕೆ ಸೀಮಿತಗೊಳಿಸದೆ ಇವುಗಳ ಸೇವನೆ ವಿಧಾನವನ್ನು ಎಂಜಾಯ್ ಮಾಡುತ್ತಾರೆ.