ಜಿಲ್ಲಾ ಕೋರ್ಟ್‌ನಲ್ಲಿ ಶೀಘ್ರ ಲಿಪಿಗಾರ ಹುದ್ದೆಗೆ ನೇರ ನೇಮಕಾತಿ: ಅರ್ಜಿ ಆಹ್ವಾನ
ಜಿಲ್ಲಾ ಕೋರ್ಟ್‌ನಲ್ಲಿ ಶೀಘ್ರ ಲಿಪಿಗಾರ ಹುದ್ದೆಗೆ ನೇರ ನೇಮಕಾತಿ: ಅರ್ಜಿ ಆಹ್ವಾನ
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕಚೇರಿ, ಬೆಳಗಾವಿ ಇಲ್ಲಿ ಖಾಲಿ ಇರುವ ಶೀಘ್ರ ಲಿಪಿಗಾರರ ಹುದ್ದೆಗೆ ನೇರ ನೇಮಕಾತಿ ನಡೆಯಲಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ದಿನಾಂಕ 21-07-2023ರಂದು ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 21-08-2023 ಆಗಿರುತ್ತದೆ.
ಈ ಕೆಳಗೆ ನೀಡಲಾದ ವೆಬ್‌ಸೈಟ್ ಲಿಂಗ್ ಬಳಸಿ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು: ಶೀಘ್ರ ಲಿಪಿಗಾರರು ಗ್ರೇಡ್ 3
ಹುದ್ದೆಗಳ ಸಂಖ್ಯೆ: ಒಟ್ಟು 13 (ಹದಿಮೂರು)
ವೇತನ ಶ್ರೇಣಿ: ಕನಿಷ್ಟ 27,650 ಹಾಗೂ ವಿಶೇಷ ಭತ್ಯೆ ನೀಡಲಾಗುವುದು.
ವಿದ್ಯಾರ್ಹತೆ: ೧) ದ್ವಿತೀಯ ಪಿಯುಸಿ ಅಥವಾ ಕರ್ನಾಟಕ ತಾಂತ್ರಿಕ ಮಂಡಳಿ ನಡೆಸುವ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರ್ಯಾಕ್ಟೀಸ್ ಅಥವಾ ತತ್ಸಮಾನ ವಿದ್ಯಾರ್ಹತೆ
೨) ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ಶೀಘ್ರ ಲಿಪಿಯಲ್ಲಿ ಹಿರಿಯ ದರ್ಜೆ ಮತ್ತು ಕನ್ನಡ ಹಾಗೂ ಆಂಗ್ಲ ಭಾಷೆಯ ಬೆರಳಚ್ಚು ಹಿರಿಯ ದರ್ಜಿಎಯ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್ ಆಗಿರಬೇಕು.
ಆನ್‌ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸಮಸ್ಯೆ ಕಂಡುಬಂದರೆ ಯಾ ತಾಂತ್ರಿಕ ತೊಂದರೆ ಕಂಡುಬಂದರೆ ಈ ಇಮೇಲ್ ವಿಳಾಸಕ್ಕೆ ದೂರು ಸಲ್ಲಿಸಿ ಬಗೆಹರಿಸಿಕೊಳ್ಳಬಹುದು.
recruitment.pdjbgm@gmail.com
ಹೆಚ್ಚಿನ ವಿವರಕ್ಕಾಗಿ ನೇಮಕಾತಿ ಕುರಿತ ಅಧಿಸೂಚನೆ ಓದಿರಿ. ಈ ಕೆಳಗಿನ ಲಿಂಕ್ ಬಳಸಿ.
https://districts.ecourts.gov.in/belagavi-online-recruitment
ಅರ್ಜಿಗಳನ್ನು ಬೆಳಗಾವಿಯ ಜಿಲ್ಲಾ ನ್ಯಾಯಾಲಯದ ವೆಬ್‌ಸೈಟ್‌ನಲ್ಲಿ ನೀಡಲಾದ ಲಿಂಕ್ ಬಳಸಿ ಆನ್‌ಲೈನ್ ಮೂಲಕ ಸಲ್ಲಿಸಬೇಕು.
https://districts.ecourts.gov.in/belagavi-online-recruitment