ಬಿಗ್ ಬಾಸ್ ಮನೆಯೊಳಗೆ ಕಿಸ್ ಚಾಲೆಂಜ್: ಲಿಪ್ ಲಾಕ್ ಬಳಿಕ ನಡೆಯಿತು ವಾಗ್ವಾದ
Monday, July 3, 2023
ಮುಂಬೈ: ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಓಟಿಟಿ ಸೀಸನ್ 2 ಆರಂಭವಾಗಿ ಕೆಲವು ದಿನಗಳು ಕಳೆದಿದೆ. ಆಗಲೇ ಮನೆಯಲ್ಲಿ ವಾದ – ವಿವಾದಗಳ ಚರ್ಚೆಗಳು ಭಾರೀ ಜೋರಾಗಿ ನಡೆಯುತ್ತಿದೆ.
ಟಾಸ್ಕ್ ವಿಚಾರವಾಗಿ ಮನೆಯಲ್ಲಿ ಸ್ಪರ್ಧಿಗಳು ಎರಡು ತಂಡಗಳಾಗಿ ವಿಭಾಗವಾಗಿದ್ದಾರೆ. ಪೂಜಾ ಭಟ್, ಫಲಕ್ ನಾಜ್, ಸೈರಸ್ ಬ್ರೋಚಾ, ಅವಿನಾಶ್ ಸಚ್‌ದೇವ್ ಮತ್ತು ಬೇಬಿಕಾ ಧುರ್ವೆ ಒಂದು ತಂಡದಲ್ಲಿದ್ದಾರೆ. ಹಾಗೆ ಮತ್ತೊಂದು ತಂಡದಲ್ಲಿ ಮನಿಶಾ ರಾಣಿ, ಆಕಾಂಕ್ಷಾ ಪುರಿ, ಜಡ್ ಹದಿದ್, ಜಿಯಾ ಶಂಕರ್, ಮತ್ತು ಅಭಿಷೇಕ್ ಮಲ್ಹಾನ್ ಇದ್ದಾರೆ.
ಟಾಸ್ಕ್ ನ ಅಂಗವಾಗಿ ʼಎʼ ತಂಡದ ಅವಿನಾಶ್ ಸಚ್‌ದೇವ್ ʼಬಿʼ ತಂಡದ ಆಕಾಂಕ್ಷಾ ಪುರಿಯವರಿಗೆ ಒಂದು ಚಾಲೆಂಜ್ ನ್ನು ಕೊಟ್ಟಿದ್ದಾರೆ. 30 ಸೆಕೆಂಡ್ ನೀವು ಕಿಸ್ ಕೊಡಬೇಕೆಂದು ಹೇಳಿದ್ದಾರೆ. ಈ ಸವಾಲನ್ನು ಸ್ವೀಕರಿಸಿದ ಆಕಾಂಕ್ಷಾ ಪುರಿ ತನ್ನ ತಂಡದ ಸಹ ಸ್ಪರ್ಧಿ ಜಡ್ ಹದಿದ್ ಅವರೊಂದಿಗೆ ಲಿಪ್ ಲಾಕ್ ಮಾಡಿದ್ದಾರೆ. 30 ಸೆಕೆಂಡ್ ಗಳಿಗಿಂತ ಜಾಸ್ತಿಯೇ ನಡೆದ ಈ ಕಿಸ್ಸಿಂಗ್ ಉಳಿದವರನ್ನು ಮುಜುಗರಕ್ಕೀಡು ಮಾಡಿದೆ. ಈ ವೇಳೆ ಪೂಜಾ ಭಟ್ ಮತ್ತು ಅಭಿಷೇಕ್ ಮಧ್ಯಪ್ರವೇಶಿಸಿ ಅವರನ್ನು ನಿಲ್ಲಿಸುವಂತೆ ಹೇಳಿದ್ದಾರೆ.
ಸಲ್ಮಾನ್ ಖಾನ್ ನಿರೂಪಣೆ ಮಾಡುವ ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಮನೆಯಲ್ಲಿ ಇರುವ ವ್ಯಕ್ತಿತ್ವದ ಹೆಚ್ಚು ಗಮನ ಕೊಡುತ್ತಾರೆ. ಆದ್ದರಿಂದ ಆಕಾಂಕ್ಷಾ ಪುರಿಯವರು ಮನಿಶಾ ರಾಣಿಯೊಂದಿಗೆ ಲಿಪ್‌ಲಾಕ್ ಬಗ್ಗೆ ಚರ್ಚಿಸಿದ್ದಾರೆ. ಸಲ್ಮಾನ್ ಖಾನ್ ಅವರು ತಮ್ಮ ಹಾವಭಾವದ ಬಗ್ಗೆ ಯಾವರೀತಿ ಪ್ರತಿಕ್ರಿಯಿಸುತ್ತಾರೆ ಎಂಬ ಭಯದೊಂದಿಗೆ ಮಾತನಾಡಿದ್ದಾರೆ. ಇದು ಕೇವಲ ಒಂದು ಚಟುವಟಿಕೆ ಮತ್ತು ಇದು ಪ್ರೇಕ್ಷಕರಿಂದ ಮತಗಳನ್ನು ಗಳಿಸಲು ನಿನಗೆ ಸಹಾಯಕವಾಗಲಿದೆ ಎಂದು ಮನೀಶಾ ಅವರು ಆಕಾಂಕ್ಷಾ ಪುರಿಗೆ ಸಮಾಧಾನ ಮಾಡಿದ್ದಾರೆ.
ಆದರೆ ಕಿಸ್ ಮಾಡುವ ಸಂದರ್ಭ ಆಕಾಂಕ್ಷಾ ನಡಗುತ್ತಿದ್ದಳು. ಅವಳು ಕೆಟ್ಟ ಕಿಸ್ಸರ್ ಎಂದು ಜಡ್ ಹದಿದ್ ಪೂಜಾ ಭಟ್ ರೊಂದಿಗೆ ಹೇಳಿದ್ದಾರೆ. ಇದಕ್ಕೆ ಆಕ್ರೋಶಗೊಂಡ ಪೂಜಾ ಭಟ್ “ನಿಸ್ಸಂಶಯವಾಗಿ, ಹುಡುಗಿಯನ್ನು ಇಡೀ ಪ್ರಪಂಚದ ಮುಂದೆ ಕಿಸ್ ಮಾಡಲು ಕೇಳಿದರೆ ಏನು ಮಾಡುತ್ತಾಳೆ? ಈ ಕಾಮೆಂಟ್ ಸರಿಯಾಗಿಲ್ಲ, ಕ್ಷಮಿಸಿ ನಾನು ಇದನ್ನು ಒಪ್ಪುವುದಿಲ್ಲ. ಭಾರತೀಯ ಮಹಿಳಾ ಕಲಾವಿದೆಯಾಗಿ, ಈ ಕಿಸ್ ನನಗೆ ಅಸಹ್ಯವಾಗಿಸಿದೆ. ಇದನ್ನು ಜಡ್ ಹದೀದ್ ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ.