![ಸಣ್ಣ ಸಾಲ ನೀಡಿ ಜನರಿಗೆ ಕಿರುಕುಳ: 42 ಆಪ್‌ಗಳ ಸೇವೆ ರದ್ದುಪಡಿಸಿದ ರಾಜ್ಯ ಸರ್ಕಾರ ಸಣ್ಣ ಸಾಲ ನೀಡಿ ಜನರಿಗೆ ಕಿರುಕುಳ: 42 ಆಪ್‌ಗಳ ಸೇವೆ ರದ್ದುಪಡಿಸಿದ ರಾಜ್ಯ ಸರ್ಕಾರ](https://blogger.googleusercontent.com/img/b/R29vZ2xl/AVvXsEjWNH7JnOW3ZP6XMwG6KfFzjUO16aiX5uhmhNNzmtK-OKFybHcRf-Tw_8cSMrL7u4AgJV3se13jFV8D0DEVQZI9FIDzabN8PqraS1Vv1W27MnSU6x81xQat4HMgqVY94wjLvb8UzUfZ1G5oNi2AZxs-n62MCrWqnjonT4oy16jnJqGxfeQZHALhrRr2qbo/w640-h362/Indian%20rupee%20cash%20notes.jpg)
ಸಣ್ಣ ಸಾಲ ನೀಡಿ ಜನರಿಗೆ ಕಿರುಕುಳ: 42 ಆಪ್‌ಗಳ ಸೇವೆ ರದ್ದುಪಡಿಸಿದ ರಾಜ್ಯ ಸರ್ಕಾರ
ಸಣ್ಣ ಸಾಲ ನೀಡಿ ಜನರಿಗೆ ಕಿರುಕುಳ: 42 ಆಪ್‌ಗಳ ಸೇವೆ ರದ್ದುಪಡಿಸಿದ ರಾಜ್ಯ ಸರ್ಕಾರ
ಯಾವುದೇ ದಾಖಲೆ ಇಲ್ಲದೆ ಸಣ್ಣ ಸಾಲ ನೀಡಿ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವ ಮೊಬೈಲ್ ಆಪ್‌ಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಇಂತಹ ಆರೋಪದ ಮೇಲೆ 42 ಆಪ್‌ಗಳ ಸೇವೆಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ. ಈ ಆಪ್‌ಗಳ ಮೊಬೈಲ್ ಆಪ್ಲಿಕೇಷನ್‌ನ್ನು ಗೂಗಲ್ ಪ್ಲೇಸ್ಟೋರ್‌ನಿಂದ ಕಳಚಿ ಹಾಕಲಾಗಿದೆ.
ವಿಧಾನಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ದಿನೇಶ್ ಗುಂಡೂರಾವ್, ಇಂತಹ ಮೊಬೈಲ್ ಆಪ್‌ಗಳ ಹಾವಳಿಯನ್ನು ತಡೆಯಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಭರವಸೆ ನೀಡಿದರು.
ಇದೇ ವೇಳೆ, ಗೇಮಿಂಗ್ ಆಪ್ ಬಗ್ಗೆ ಸೆಲೆಬ್ರಿಟಿಗಳು ಪ್ರಚಾರ ನೀಡುತ್ತಿರುವುದು ಕಳವಳಕಾರಿ. ಇದನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ ಎಂದು ಅವರು ಹೇಳಿದರು.
ಯುವಜನರು ಸುಲಭದ ಸಾಲಕ್ಕೆ ಮರುಳಾಗಿ ಆಪ್‌ಗಳಿಂದ ಸಾಲ ಪಡೆದುಕೊಳ್ಳುತ್ತಾರೆ. ಈ ಮೂಲಕ ಅದರ ವಿಷ ವರ್ತುಲಕ್ಕೆ ಸಿಕ್ಕಿ ಬೀಳುತ್ತಾರೆ. ಬಳಿಕ, ಅತಿಯಾದ ಬಡ್ಡಿ ಹಾಗೂ ಅಸಲು ಸಾಲ ಹಿಂತಿರುಗಿಸಲಾಗದೆ ಸಮಸ್ಯೆಗೆ ಸಿಕ್ಕಿ ಹಾಕಿಕೊಳ್ಳುತ್ತಾರೆ.
ಇತ್ತೀಚಿಗಷ್ಟೆ ಕರಾವಳಿ ಕರ್ನಾಟಕದ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಇದೇ ರೀತಿ ಸಾಲ ಪಡೆದು ಬಳಿಕ ಸಾಲ ತೀರಿಸಲಾಗದೆ ಮತ್ತು ಆಪ್ ಕಿರುಕುಳಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ.
ಇಂತಹ 800ಕ್ಕೂ ಅಧಿಕ ಆಪ್‌ಗಳು ಚಾಲ್ತಿಯಲ್ಲಿದ್ದರೂ ಅದನ್ನು ನಿಯಂತ್ರಿಸಬೇಕಾಗಿರುವುದು ಕೇಂದ್ರ ಸರ್ಕಾರ. ಈ ಹಿನ್ನೆಲೆಯಲ್ಲಿ ಕೇಂದ್ರದ ಜೊತೆಗೆ ಮಾತುಕತೆ ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.