Lover ಜೊತೆಗೆ ಪತ್ನಿಯ ಮದುವೆ ಮಾಡಿಸಿದ ಪತಿ ( VIDEO)
Saturday, July 8, 2023
ಪಟನಾ: 1999ರಲ್ಲಿ ತೆರೆಕಂಡ 'ಹಮ್ ದಿಲ್ ದೇ ಚುಕೆ ಸನಮ್' ಹಿಂದಿ ಸಿನಿಮಾ ಮಾದರಿಯಲ್ಲಿ ವ್ಯಕ್ತಿಯೊಬ್ಬ ಪತ್ನಿಯನ್ನು ಆಕೆಯ ಪ್ರಿಯಕರನಿಗೆ ಕೊಟ್ಟು ಮದುವೆ ಮಾಡಿಸಿರುವ ಘಟನೆ ಬಿಹಾರದ ನವಾಡ ಜಿಲ್ಲೆಯಲ್ಲಿ ಜರುಗಿದೆ.
ಪತಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ಮಹಿಳೆಯನ್ನು ಭೇಟಿಯಾಗಲು ಆಕೆಯ ಪ್ರಿಯಕರ ತಡರಾತ್ರಿ ಮನೆಗೆ ಬಂದಿದ್ದ. ಆಗ ಕುಟುಂಬದವರ ಕೈಗೆ ಇಬ್ಬರೂ ಸಿಕ್ಕಿ ಬಿದ್ದರು.
ಕುಟುಂಬದ ಸದಸ್ಯರು ಆ ವ್ಯಕ್ತಿಯನ್ನು ಥಳಿಸಿ ಇಬ್ಬರನ್ನೂ ત્ ಊರು ಬಿಟ್ಟು ಹೋಗುವಂತೆ ಒತ್ತಾಯಿಸಿದರು. ಆದರೆ, ಪತಿ ಮನೆಗೆ ಹಿಂದಿರುಗಿ ಬಂದಾಗ ವಿಷಯ ತಿಳಿದು ಕೂಡಲೇ ಪತ್ನಿಯನ್ನು ದೇವಸ್ಥಾನಕ್ಕೆ ಕರೆದೊಯ್ದು ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ.
ಪ್ರಿಯಕರನಿಗೆ ಈಗಾಗಲೇ ಮದುವೆಯಾಗಿದ್ದು ಮೂರು ಮಕ್ಕಳಿದ್ದಾರೆ ಎಂದು ತಿಳಿದುಬಂದಿದೆ. ಆತನ ವಿರುದ್ಧ ಸದ್ಯಕ್ಕೆ ಯಾವುದೇ ದೂರು ದಾಖಲಾಗಿಲ್ಲ, ಹಣೆಗೆ ಸಿಂಧೂರ ಹಚ್ಚುತ್ತಿರುವ ದೇವಸ್ಥಾನದಲ್ಲಿನ ವಿವಾಹದ ಫೋಟೊ, ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.