Mangalore- 100 ಕೆ ಜಿ ಡ್ರಗ್ಸ್ ಲೇಪಿತ ಚಾಕೊಲೇಟ್ ವಶ
Thursday, July 20, 2023
ಮಂಗಳೂರು; ಖಚಿತ ಮಾಹಿತಿಯ ಆಧಾರದ ಮೇಲೆ, ಪಾಂಡೇಶ್ವರ ಪೊಲೀಸರು ಬುಧವಾರ (ಜುಲೈ 19) ರಂದು ನಗರದ ಎರಡು ಅಂಗಡಿಗಳ ಮೇಲೆ ದಾಳಿ ನಡೆಸಿ, ಬ್ಯಾಂಗ್ ಚಾಕೊಲೇಟ್ ಎಂದು ಲೇಬಲ್ ಮಾಡಿದ 100 ಕೆಜಿ ಮಾದಕವಸ್ತು ಮಿಶ್ರಿತ ಚಾಕೊಲೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ ಸ್ಟ್ರೀಟ್‌ನಲ್ಲಿರುವ ಮನೋಹರ್ ಶೇಟ್ ಮಾಲೀಕತ್ವದ ಅಂಗಡಿಯ ಮತ್ತು ಫಳ್ನೀರ್‌ನಲ್ಲಿರುವ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬವರ ಅಂಗಡಿಯಲ್ಲಿ ಡ್ರಗ್ಸ್ ಲೇಪಿತ ಚಾಕೊಲೇಟ್ ಪತ್ತೆಯಾಗಿದೆ.
ಮನೋಹರ್ ಶೇಟ್ ಮತ್ತು ಬೆಚ್ಚನ್ ಸೋಂಕರ್ ಇಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ.
ಏತನ್ಮಧ್ಯೆ, ಜಪ್ತಿ ಮಾಡಿದ ಚಾಕೊಲೇಟ್‌ಗಳಲ್ಲಿ ನಿರ್ದಿಷ್ಟ ರೀತಿಯ ಮಾದಕ ದ್ರವ್ಯಗಳನ್ನು ಬೆರೆಸಲಾಗಿದೆ ಎಂಬುದನ್ನು ಗುರುತಿಸಲು ಸಂಪೂರ್ಣ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಿಧಿವಿಜ್ಞಾನ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.