MANGALORE-ಪಾಸಾಗಿದ್ದಕ್ಕೆ ಟ್ರೀಟ್ ಬೇಕು... ಎಂದು ವಿದ್ಯಾರ್ಥಿನಿ ಜೊತೆಗೆ ಅಸಭ್ಯ ವರ್ತನೆ- ಆರೋಪಿ ಎಸ್ಕೇಪ್
Saturday, July 29, 2023
ಮಂಗಳೂರು: ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪದಲ್ಲಿ ಆಟೊ ರಿಕ್ಷಾ ಚಾಲಕನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಅಟೊ ರಿಕ್ಷಾ ಚಾಲಕ ಇನ್ಸಾಲ್ ಆರೋಪಿ. ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ವಿದ್ಯಾರ್ಥಿನಿಯು ಬಸ್ ನಿಲ್ದಾಣದಲ್ಲಿ ನಿಂತಿದ್ದಾಗ ಅಲ್ಲಿಗೆ ಬಂದ ಆರೋಪಿ 'ಪಾಸಾದುದಕ್ಕೆ ಟ್ರೀಟ್ ಬೇಕು' ಎಂದು ಕೇಳಿದ್ದ. ಅಲ್ಲದೆ, ಅಶ್ಲೀಲವಾಗಿಯೂ ವರ್ತಿಸಿದ್ದ ಎಂದು ಮನೆಯವರಿಗೆ ವಿಚಾರ ತಿಳಿಸಿದ್ದಳು.
ಮನೆಮಂದಿ ಈ ಬಗ್ಗೆ ಚಾಲಕನನ್ನ ಪ್ರಶ್ನಿಸಲು ಕುತ್ತಾರಿನ ಅಟೋ ರಿಕ್ಷಾ ಪಾರ್ಕ್‌ಗೆ ತೆರಳಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ.
ಗುರುವಾರ ರಾತ್ರಿ ವಿದ್ಯಾರ್ಥಿನಿಯ ಪೋಷಕರು ಕೊಣಾಜೆ ಠಾಣೆಗೆಯಲ್ಲಿ ದೂರು ದಾಖಲಿಸಿದ್ದಾರೆ.
ಪೊಲೀಸರು ಆರೋಪಿಯ ಪತ್ತೆಗೆ ಮುಂದಾಗಿದ್ದಾರೆ.