-->
Mangalore- ಅಪಾರ್ಟ್ಮೆಂಟ್ ಕಟ್ಟಡದ ಬಾಲ್ಕನಿಯಿಂದ ಜಾರಿ ಬಿದ್ದ ಮೆಡಿಕಲ್ ವಿದ್ಯಾರ್ಥಿ ಸಾವು

Mangalore- ಅಪಾರ್ಟ್ಮೆಂಟ್ ಕಟ್ಟಡದ ಬಾಲ್ಕನಿಯಿಂದ ಜಾರಿ ಬಿದ್ದ ಮೆಡಿಕಲ್ ವಿದ್ಯಾರ್ಥಿ ಸಾವು


ಮಂಗಳೂರು: ನಗರದ ಕದ್ರಿ ಶಿವಭಾಗ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ 5ನೇ ಮಹಡಿಯ ಬಾಲ್ಕನಿಯಿಂದ ಜಾರಿ ಬಿದ್ದು ಮೆಡಿಕಲ್ ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ ಘಟನೆ ರವಿವಾರ ಬೆಳಗ್ಗೆ ನಡೆದಿದೆ.

ಮೂಲತಃ ಅಡ್ಯಾರ್ ನಿವಾಸಿ, ಪ್ರಸ್ತುತ ಕದ್ರಿ ಶಿವಭಾಗ್ ನಿವಾಸಿ ಸಮಯ್ (21) ಮೃತಪಟ್ಟ ಮೆಡಿಕಲ್ ವಿದ್ಯಾರ್ಥಿ.

ಆದಿತ್ಯವಾರ ಬೆಳಗ್ಗೆ ಶಿವಭಾಗ್ ಅಪಾರ್ಟ್‌ಮೆಂಟ್‌ನ ತಮ್ಮ ಫ್ಲ್ಯಾಟ್‌ನ ಬಾಲ್ಕನಿಯಲ್ಲಿ ಸಮಯ್ ಅವರು ಓದುತ್ತಿದ್ದಾಗ ಅವರ ತಾಯಿ ಕಾರು ವಾಷ್ ಮಾಡಲು ನೆಲಮಹಡಿಗೆ ಹೋಗೋಣ ಎಂದು ಹೇಳಿ ಹೋಗಿದ್ದರು. ಈ ವೇಳೆ ಸಮಯ್ ಅವರು ಬಾತ್‌ರೂಂಗೆ ಹೋಗಿ ಬಂದು, ಬಳಿಕ ನೆಲಮಹಡಿಯ ಪಾರ್ಕಿಂಗ್ ಜಾಗದಲ್ಲಿರುವ ತನ್ನ ತಾಯಿ ಬಳಿ ಕಾರು ತೊಳೆಯಲು ಬಕೆಟ್  ಕೊಂಡು ಹೋಗಿದ್ದೀರಾ ಎಂದು ಬಾಲ್ಕನಿಯಿಂದ ಕೇಳಿದಾಗ ಮಳೆ ನೀರಿನ ಹನಿಯಿಂದ ಅವರು ಜಾರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಸಾವನ್ನಪ್ಪಿದ್ದರು.

ಸಮಯ್ ಅವರ ತಂದೆ ಸಿವಿಲ್ ಇಂಜಿನಿಯರ್ ಆಗಿದ್ದು, ತಾಯಿ ಗೃಹಿಣಿಯಾಗಿದ್ದಾರೆ. ಈ ದಂಪತಿಯ ಇಬ್ಬರು ಗಂಡು ಮಕ್ಕಳಲ್ಲಿ ಸಮಯ್ ಹಿರಿಯವರಾಗಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article