-->
ವಿವಾಹಿತನಿಗಾಗಿ ನಾಲ್ವರು ಮಹಿಳೆಯರ ನಡುವೆ ಹೊಡೆದಾಟ

ವಿವಾಹಿತನಿಗಾಗಿ ನಾಲ್ವರು ಮಹಿಳೆಯರ ನಡುವೆ ಹೊಡೆದಾಟ


ಲಾಸ್ ವೇಗಸ್: ವಿವಾಹಿತ ವ್ಯಕ್ತಿಗಾಗಿ ನಾಲ್ವರು ಮಹಿಳೆಯರು ಸಾರ್ವಜನಿಕರ ಮುಂಭಾಗವೇ ಬಡಿದಾಡಿಕೊಂಡ ಘಟನೆ ಯುನೈಟೆಡ್​ ಸ್ಟೇಟ್ಸ್​ನ ಲಾಸ್​ ವೇಗಾಸ್​ನಲ್ಲಿ ನಡೆದಿದೆ. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ಪೊಲೀಸರು ನಾಲ್ವರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೈಕ್​ ಹ್ಯಾರಿಸ್​ ಎಂಬಾತನಿಗಾಗಿ ನಾಲ್ವರು ಮಹಿಳೆಯರ ಲಾಸ್​ವೇಗಾಸ್​ನ ವಿನ್ ಹೋಟೆಲ್​​ನಲ್ಲಿ ನಡುವೆ ಹೊಡೆದಾಟ ನಡೆಸಿದ್ದಾರೆ. ಮೈಕ್​ ಹ್ಯಾರಿಸ್​  ವಿವಾಹಿತನಾಗಿದ್ದರೂ, ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾನೆ. ಈ ವಿಚಾರ ಆತನ ಪತ್ನಿಗೆ ತಿಳಿದು ಆತ ಸಂಬಂಧ ಹೊಂದಿದ್ದ ಮೂವರು ಮಹಿಳೆಯರ ನಂಬರ್​ಗಳನ್ನು ಪತ್ತೆ ಹಚ್ಚಿದ್ದಾಳೆ.


ಬಳಿಕ ಅವರಿಗೆ ಕರೆ ಮಾಡಿ ವಿನ್​ ಹೋಟೆಲ್​ಗೆ ಬರುವಂತೆ ಸೂಚಿಸಿದ್ದಾಳೆ. ಅದರಂತೆ ಸ್ಥಳಕ್ಕೆ ಬಂದ ಮೂವರು ಮಹಿಳೆಯರ ಮೇಲೆ ಆಕೆ ಏಕಾಏಕಿ ದಾಳಿ ಮಾಡಿದ್ದಾಳೆ. ಈ ವೇಳೆ ಮೈಕ್​ ಹ್ಯಾರಿಸ್​ಗೆ ಈಗಾಗಲೇ ಮದುವೆಯಾಗಿದೆ ಎಂಬ ವಿಚಾರ ಹೊರಬಿದ್ದಿದೆ. ಈ ಸುದ್ದಿಯನ್ನು ತಿಳಿದ ಮೂವರು ಮಹಿಳೆಯರು ಆತನ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ.

ಇದನ್ನು ನೋಡಿದ ಮೈಕ್​ ಹ್ಯಾರಿಸ್ ಪತ್ನಿ ಎರಿನ್​ ಹ್ಯಾರಿಸ್​ ಮೂವರು ಮಹಿಳೆಯರೊಂದಿಗೆ ಹೊಡೆದಾಡಿದ್ದಾಳೆ. ನಾಲ್ವರು ಮಹಿಳೆಯರ ನಡುವಿನ ಹೊಡೆದಾಟವನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಚಾರವಾಗಿ ಮೈಕ್​ನನ್ನು ಪೊಲೀಸ್​ ಠಾಣೆಗೆ ಕರೆಸಿ ವಿಚಾರಣೆ ನಡೆಸಿದಾಗ ಆತ ನನಗೂ ಇದಕ್ಕೂ ಯಾವುದೇ ತರಹದ ಸಂಬಂಧವಿಲ್ಲ. ಇದರಿಂದ ತನಗೆ ಏನು ಆಗಬೇಕಾಗಿಲ್ಲ ಎಂದು ತನ್ನ ಹೇಳಿಕೆಯನ್ನು ದಾಖಲಿಸಿದ್ದಾನೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article