ಪತ್ನಿಯ ಮುಂಭಾಗವೇ ಪತಿಯ ಭೀಕರ ಹತ್ಯೆ: ಭೀಮನ ಅಮವಾಸ್ಯೆಗೆ ಪತಿ ಪಾದಪೂಜೆ ಮಾಡಿ ಹತ್ಯೆಗೆ ಮುಹೂರ್ತವಿಟ್ಟ ಹಂತಕಿ ಪತ್ನಿ
ಬೆಳಗಾವಿ: ಇಲ್ಲಿನ ವಡೇರಹಟ್ಟಿ ಗ್ರಾಮದಲ್ಲಿ ಪತ್ನಿ ಮುಂಭಾಗವೇ ನಡೆದ ಪತಿಯ ಭೀಕರ ಹತ್ಯೆ ಪ್ರಕರಣವು ಟ್ವಿಸ್ಟ್ ದೊರಕಿದ್ದು, ಪತ್ನಿಯೇ ಹತ್ಯೆಯ ರೂವಾರಿ ಎಂಬುದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.
ಇದೀಗ ಕೊಲೆಯಾದ ಶಂಕರ ಜಗಮುತ್ತಿ ಪತ್ನಿ ಪ್ರಿಯಾಂಕಾ ಜಗಮುತ್ತಿಯನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.
ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಜು.17ರಂದು ಶಂಕರ ಜಗಮುತ್ತಿ ಎಂಬ ಯುವಕನ ಭೀಕರ ಹತ್ಯೆ ನಡೆದಿದೆ. ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪತಿಯ ಪಾದ ಪೂಜೆ ಮಾಡಿದ ಆತನ ಪತ್ನಿ ಕೊಲೆಗೆ ಮುಹೂರ್ತ ಇಟ್ಟಿದ್ದಳು. ಊರ ಹೊರವಲಯದ ಬನಸಿದ್ದೇಶ್ವರ ದೇವಸ್ಥಾನಕ್ಕೆ ಪತಿಯೊಂದಿಗೆ ಪ್ರಿಯಾಂಕಾ ಬಂದಿದ್ದಳು. ಆದರೆ ಮನೆ ಬಿಡುವ ಮುನ್ನ ಪ್ರಿಯಕರ ಶ್ರೀಧರ್ಗೆ ಕರೆ ಮಾಡಿ ದೇವಸ್ಥಾನಕ್ಕೆ ಬಂದಿದ್ದಳು.
ದೇವರ ದರ್ಶನ ಮುಗಿಸಿಕೊಂಡು ವಾಪಸ್ ಬರುತ್ತಿದ್ದಂತೆ ಚಾಕುವಿನಿಂದ ಇರಿದು ಶಂಕರ ಜಗಮುತ್ತಿಯನ್ನು ಶ್ರೀಧರ್ ಕೊಲೆ ಮಾಡಿದ್ದಾನೆ. ಬೈಕ್ ತೆಗೆದುಕೊಂಡು ಬನ್ನಿ ಎಂದು ಹೇಳಿ ಪ್ರಿಯಾಂಕಾ ದೂರದಲ್ಲಿ ನಿಂತಿದ್ದಳು. ಅದರಂತೆ ಬಂದ ಶ್ರೀಧರ್, ದೇವಸ್ಥಾನಕ್ಕೆ ಬಂದಿದ್ದ ಶಂಕರ್ ಗೆ ಚಾಕುವಿನಿಂದ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದಾನೆ.
ಕೊಲೆ ಬಳಿಕ ತನಗೇನೂ ಗೊತ್ತಿಲ್ಲದಂತೆ ಪ್ರಿಯಾಂಕಾ ಕಣ್ಣೀರಿನ ನಾಟಕವಾಡಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರಿಗೆ ಆರೋಪಿ ಶ್ರೀಧರ್ ಮತ್ತು ಪ್ರಿಯಾಂಕಾ ನಡುವೆ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ಆದ್ದರಿಂದ ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್ ಹೀಗೆ ಟೆಕ್ನಿಕಲ್ ಎವಿಡೆನ್ಸ್ ಆಧಾರದ ಮೇಲೆ ಪ್ರಿಯಾಂಕಾಳನ್ನು ಬಂಧಿಸಿದಾಗ ಸತ್ಯ ಬಯಲಾಗಿದೆ. ಆದ್ದರಿಂದ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕೊಲೆ ಆರೋಪಿ ಶ್ರೀಧರ್ನನ್ನು ಮೂಡಲಗಿ ಪೊಲೀಸರು ಬಂಧಿಸಿದ್ದಾರೆ.