-->
ಪಬ್ ಜಿಯಿಂದ ಆರಂಭವಾದ ಲವ್ ಸ್ಟೋರಿ: ಪ್ರೇಮಿಯನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಾಲ್ವರು ಮಕ್ಕಳ ತಾಯಿ

ಪಬ್ ಜಿಯಿಂದ ಆರಂಭವಾದ ಲವ್ ಸ್ಟೋರಿ: ಪ್ರೇಮಿಯನ್ನು ಹುಡುಕಿಕೊಂಡು ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಾಲ್ವರು ಮಕ್ಕಳ ತಾಯಿ


ಲಖನೌ: ಆನ್‌ಲೈನ್ ಗೇಮ್ ಪಬ್-ಜಿ ಪರಿಚಿತನಾದವನನ್ನು ಹುಡುಕಿಕೊಂಡು ಯುವತಿಯೊಬ್ಬಳು ತನ್ನ ನಾಲ್ಕು ಮಕ್ಕಳೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಘಟನೆ ಉತ್ತರಪ್ರದೇಶದ ನೊಯ್ದಾದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯುವತಿ ಹಾಗೂ ಆಕೆಗೆ ಆಶ್ರಯ ನೀಡಿರುವಾತನನ್ನು ಬಂಧಿಸಿದ್ದು, ನಾಲ್ವರು ಮಕ್ಕಳನ್ನು CWC ಸದಸ್ಯರ ಸುಪರ್ದಿಗೆ ಒಪ್ಪಿಸಿದ್ದಾರೆ.

ಸೀಮಾ ಗುಲಾಂ ಹೈದರ್(20) ಎಂಬಾಕೆಗೆ ಪಬ್-ಜಿ ಆಡುವ ವೇಳೆ ನೊಯ್ಡಾ ಮೂಲದ ಸಚಿನ್ ಎಂಬುವನೊಂದಿಗೆ ಪರಿಚಯವಾಗಿದೆ. ದಿನ ಕಳೆದಂತೆ ಇಬ್ಬರು ನಡುವೆ ಆತ್ಮೀಯತೆ ಬೆಳೆದಿದ್ದು, ಪರಿಚಯ ಪ್ರೀತಿಯಾಗಿ ಮಾರ್ಪಟ್ಟಿದೆ. ಕೆಲ ದಿನಗಳ ಬಳಿಕ ಸೀಮಾ ತನ್ನ ನಾಲ್ವರು ಮಕ್ಕಳೊಂದಿಗೆ ಪಾಕಿಸ್ತಾನ ತೊರೆದಿದ್ದು, ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಾಳೆ. ಬಳಿಕ ಲಿವ್-ಇನ್ -ರಿಲೇಷನ್‌ಶಿಪ್‌ನಲ್ಲಿದ್ದ ಸಚಿನ್ ಹಾಗೂ ಸೀಮಾ ನೊಯ್ಡಾದ ರಬುಪುರ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಜೊತೆಯಾಗಿ ವಾಸಿಸುತ್ತಿದ್ದರು.

ಆದರೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಪಾಕಿಸ್ತಾನ ಮೂಲದ ಮಹಿಳೆ ನೊಯ್ದಾದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವಿಚಾರ ತಿಳಿದಿದೆ. ಈ ಬಗ್ಗೆ ಅಪಾರ್ಟ್‌ಮೆಂಟ್ ಮಾಲಕರನ್ನು ಪ್ರಶ್ನಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಸಚಿನ್ ಹಾಗೂ ಸೀಮಾ ಬಾಡಿಗೆ ಮನೆಯನ್ನು ತೊರೆದು ಪರಾರಿಯಾಗಿದ್ದರು. ಮನೆ ಮಾಲಕರು ಹೇಳುವ ಪ್ರಕಾರ ಆಕೆ ಪಾಕಿಸ್ತಾನದವರಂತೆ ಕಾಣಲಿಲ್ಲ ಎಂದು ಹೇಳಿದ್ದಾರೆ.

ಇವರಿಬ್ಬರನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿತ್ತು. ಆರೋಪಿಗಳಿಬ್ಬರು ನೊಯ್ದಾದಲ್ಲೇ ಅಡಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಬೆನ್ನಲ್ಲೇ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಸೀಮಾಗೆ ಈಗಾಗಲೇ ಮದುವೆಯಾಗಿ ನಾಲ್ವರು ಮಕ್ಕಳಿದ್ದರು. ಆದರೂ ಸಚಿನ್ ನನ್ನು ಲವ್ ಮಾಡಲು ಶುರು ಮಾಡಿದ ಬಳಿಕ ಕುಟುಂಬಸ್ಥರನ್ನು ತೊರೆದು ನೇಪಾಳದ ಮೂಲಕ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಳು. ಸದ್ಯ ವಿಚಾರಣೆ ನಡೆಯುತ್ತಿದ್ದು, ಮಹಿಳೆ ಪಾಕಿಸ್ತಾನದಲ್ಲಿ ಯಾವ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ.

ವಿಚಾರಣೆ ಮುಗಿದ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದು ನೊಯ್ಡಾ ಡಿಸಿಪಿ ಸಾದ್ ಮಿಯಾ ಖಾನ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದಾರೆ.

Ads on article

Advertise in articles 1

advertising articles 2

Advertise under the article