ಅಂಧ ಅಪ್ರಾಪ್ತೆಯ ಹಾಡು ವೈರಲ್ ಮಾಡೋದಾಗಿ ನಂಬಿಸಿದ ಯೂಟ್ಯೂಬರ್ ಮಾಡಿದ್ದೇನು ಗೊತ್ತೇ?
Saturday, July 8, 2023
ಕೊಚ್ಚಿ: ದೃಷ್ಟಿಹೀನವುಳ್ಳ ಅಪ್ರಾಪ್ತೆಯ ಹಾಡನ್ನು ವೈರಲ್ ಮಾಡಿಸುವೆನೆಂದು ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಅಡಿಯಲ್ಲಿ ಯೂಟ್ಯೂಬರ್‌ನನ್ನು ಕೇರಳದ ಮುನಂಬಾಮ್ ಪೊಲೀಸರು ಬಂಧಿಸಿದ್ದಾರೆ.
ಕೊಟ್ಟಾಯಂ ನಿವಾಸಿ ಜೀಮೊನ್ (42) ಬಂಧಿತ ಯೂಟ್ಯೂಬರ್. ಅಪ್ರಾಪ್ತೆ ಹಾಡುವ ಹಾಡನ್ನು ವೈರಲ್ ಮಾಡುವುದಾಗಿ ಭರವಸೆ ನೀಡಿ, ಈ ನೀಚ ಕೃತ್ಯವನ್ನು ಎಸಗಿದ್ದಾನೆ.
ಹಾಡಿನ ಚಿತ್ರೀಕರಣ ಮಾಡಬೇಕೆಂದು ನಂಬಿಸಿ, ಅಪ್ರಾಪ್ತೆಯನ್ನು ಕೊಟ್ಟಾಯಂ ಚೆರೈನಲ್ಲಿರುವ ಲಾಡ್ಜ್ ಒಂದಕ್ಕೆ ಕರೆದೊಯ್ದಿದ್ದಾನೆ ಆರೋಪಿ. ಈ ವೇಳೆ ಬಾಲಕಿಯೊಂದಿಗೆ ಆಕೆಯ ತಾಯಿ ಹಾಗೂ ಸಹೋದರ ಕೂಡಾ ಇದ್ದರು. ಆದರೆ, ಅವರಿಬ್ಬರು ಹತ್ತಿರದಲ್ಲಿಲ್ಲದ ವೇಳೆ ಆರೋಪಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಸಂತ್ರಸ್ತ ಬಾಲಕಿ ಈ ವಿಚಾರವನ್ನು ತನ್ನ ಪಾಲಕರಿಗೆ ತಿಳಿಸಿದ್ದಾಳೆ. ಅವರು ನೀಡಿದ ದೂರಿನನ್ವಯ ಯೂಟ್ಯೂಬರ್ ನನ್ನು ಬಂಧಿಸಲಾಗಿದೆ. ಆತನ ವಿರುದ್ಧ ಪೊಕ್ಸೊ ಸೇರಿದಂತೆ ಐಪಿಸಿ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.