ಖಾಕಿ ಜೊತೆ ತೃತೀಯ ಲಿಂಗಿಗಳ ವಾಗ್ವಾದ: ಪೊಲೀಸರು ಅನೈತಿಕ ಚಟುವಟಿಕೆ ತಡೆದದ್ದೇ ತಪ್ಪಾ..?
ಖಾಕಿ ಜೊತೆ ತೃತೀಯ ಲಿಂಗಿಗಳ ವಾಗ್ವಾದ: ಪೊಲೀಸರು ಅನೈತಿಕ ಚಟುವಟಿಕೆ ತಡೆದದ್ದೇ ತಪ್ಪಾ..?
ಕಾನೂನು ರಕ್ಷಣೆ ಮಾಡುತ್ತಿರುವ ಖಾಕಿ ಸಿಬ್ಬಂದಿ ಜೊತೆ ತೃತೀಯ ಲಿಂಗಿಗಳು ಸಾರ್ವಜನಿಕವಾಗಿ ಒಂದು ಗಂಟೆಗೂ ಹೆಚ್ಚು ಕಾಲ ವಾಗ್ವಾದ ನಡೆಸಿದ ಘಟನೆ ಮಂಗಳೂರಿನ ಕುಂಟಿಕಾನ ಜಂಕ್ಷನ್‌ನಲ್ಲಿ ನಡೆದಿದೆ.
ಸೂರ್ಯ ಅಸ್ತಮಾನವಾಗಿ ಕತ್ತಲು ಕವಿಯುತ್ತಿದ್ದಂತೆಯೇ ಅರೆ ನಗ್ನ ಹಾಗೂ ಅಶ್ಲೀಲ ವಸ್ತ್ರ ಧರಿಸಿ ಅಂಗಾಂಗ ಪ್ರದರ್ಶನ ಮಾಡುವ ತೃತೀಯ ಲಿಂಗಿಗಳು ಇಲ್ಲಿ ಪ್ರತ್ಯಕ್ಷರಾಗುತ್ತಾರೆ.
ಸಭ್ಯ ನಾಗರಿಕ ಸಮಾಜದಲ್ಲಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸುತ್ತಾ ಅನೈತಿಕ ಚಟುವಟಿಕೆಯಲ್ಲಿ ತೊಡಗುವ ಈ ದುಷ್ಕರ್ಮಿಗಳು, ಸಭ್ಯರ ಜೊತೆಗೆ ಪುಂಡಾಟಿಕೆ ನಡೆಸುವುದೂ ಇದೆ.
ಈ ಅನೈತಿಕ ಚಟುವಟಿಕೆ ತಡೆಯುವ ನಿಟ್ಟಿನಲ್ಲಿ ಮಹಿಳಾ ಸಿಬ್ಬಂದಿ ಸಹಿತ ಪೊಲೀಸರು ಮಧ್ಯಪ್ರವೇಶಿಸಿದ್ದು ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಆದರೆ, ಈ ಪುಂಡ ತೃತೀಯ ಲಿಂಗಿಗಳು ಉಲ್ಟಾ ಪೊಲೀಸರ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದಾರೆ. ರಂಪ ರಾಮಾಯಣ ಮಾಡಿದ ಹತ್ತಕ್ಕೂ ಹೆಚ್ಚು ತೃತೀಯ ಲಿಂಗಿಗಳ ಗುಂಪಿನ ಈ ವರ್ತನೆ ಸಾರ್ವಜನಿಕರಿಗೆ ಬಿಟ್ಟಿ ಮನರಂಜನೆಯಾಗಿತ್ತು.
ಪೊಲೀಸರು ಮಾತ್ರ ತಮ್ಮ ಕರ್ತವ್ಯವನ್ನು ಸಮರ್ಪಕವಾಗಿ ನಿಭಾಯಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.