ಕೋಟಿ ಕೊಟ್ಟರೂ ಕಿಸ್ ಮಾಡಲ್ಲ, ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಲ್ಲ - ಪ್ರಿಯಾಮಣಿ
Saturday, July 1, 2023
ಬೆಂಗಳೂರು: ಸೌತ್ ಇಂಡಿಯಾದ ಪ್ರಖ್ಯಾತ ಪ್ರಿಯಾಮಣಿ ಭಾರತೀಯ ಸಿನಿಮಾರಂಗದಲ್ಲಿ ಟಾಪ್ ನಟಿಯರಲ್ಲಿ ಓರ್ವರಾಗಿ ಗಮನ ಸೆಳೆಯುತ್ತಿದ್ದಾರೆ. ಸದ್ಯ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟು 20 ವರ್ಷಗಳಾದರೂ ಈ ಬಹುಭಾಷಾ ನಟಿ ಈಗಲೂ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ. ಇದುವರೆಗೂ ಕಿಸ್ಸಿಂಗ್ ಸೀನ್‌ಗೆ ನಟಿ ನೋ ಎನ್ನುತ್ತಾರೆ. ಯಾಕೆ? ಈ ಬಗ್ಗೆ ಪ್ರಿಯಾಮಣಿ ಅವರ ಅಭಿಪ್ರಾಯವೇನು ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಕನ್ನಡದ ರಾಮ್, ಅಣ್ಣಾ ಬಾಂಡ್, ಕೋ ಕೋ, ವಿಷ್ಣುವರ್ಧನ, ಲಕ್ಷ್ಮಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯಲ್ಲಿ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸಿರೀಸ್‌ನಲ್ಲಿ ಪ್ರಿಯಾ ನಟಿಸಿದ್ದಾರೆ. ’ಚೆನ್ನೈ ಎಕ್ಸ್‌ಪ್ರೆಸ್’ ಸಿನಿಮಾದಲ್ಲಿನ ಹಾಡಿಗೆ ಶಾರುಖ್ ಖಾನ್ ಜೊತೆ ಪ್ರಿಯಾಮಣಿ ಹೆಜ್ಜೆ ಹಾಕಿದ್ದಾರೆ. 20 ವರ್ಷಗಳಲ್ಲಿ ಭಿನ್ನ ಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿರೋ ಪ್ರಿಯಾಮಣಿ, ಕೋಟಿ ಸಂಭಾವನೆ ಕೊಟ್ಟರೂ ಹಾಟ್ ದೃಶ್ಯ, ಲಿಪ್ ಲಾಕ್ ಸೀನ್‌ಗಳಲ್ಲಿ ನಟಿಸೋದಿಲ್ಲವಂತೆ.
ಸಿನಿಮಾದಲ್ಲಿ ನಟಿಸುವಾಗ ಅದು ಕೇವಲ ಒಂದು ಪಾತ್ರ ಆಗಿರುತ್ತದೆ. ಈ ಕಾರಣಕ್ಕೆ ಕೆಲವರು ಎಂತಹ ದೃಶ್ಯವಿದ್ದರೂ ನಟಿಸುತ್ತಾರೆ. ಕೆಲವರು ಮಡಿವಂತಿಕೆ ಕಾಪಾಡಿಕೊಳ್ಳುತ್ತಾರೆ. ಕಿಸ್ ದೃಶ್ಯಗಳಲ್ಲಿ, ಹಸಿಬಿಸಿ ದೃಶ್ಯಗಳಲ್ಲಿ ನಟಿಸೋಕೆ ನೋ ಎನ್ನುತ್ತಾರೆ. ಪ್ರಿಯಾಮಣಿ ಎರಡನೇ ಸಾಲಿಗೆ ಸೇರುತ್ತಾರೆ. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ 'ತಾನು ತೆರೆಯಮೇಲೆ ಕಿಸ್ ಮಾಡಲ್ಲ. ನನಗೆ ಗೊತ್ತು ಅದು ಕೇವಲ ಪಾತ್ರ ಮತ್ತು ಅದು ನನ್ನ ಕೆಲಸ. ಆದರೆ, ಬೇರೆ ಪುರುಷನೊಂದಿಗೆ ತೆರೆಮೇಲೆ ಕಿಸ್ ಮಾಡಲು ನನಗೆ ಇರಿಸುಮುರುಸಾಗುತ್ತದೆ. ನಾನು ಉತ್ತರ ಕೊಡಬೇಕಾಗಿರುವುದು ನನ್ನ ಪತಿಗೆ ಮಾತ್ರ ಎಂದಿದ್ದಾರೆ.
ಮದುವೆ ಬಳಿಕ ಪಾತ್ರಗಳನ್ನು ಮಾಡುತ್ತಿಲ್ಲ. ಆ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಳ್ಳದೇ ಇರೋದು ನನ್ನ ಜವಾಬ್ದಾರಿ. ಇತ್ತೀಚೆಗೆ ನಿರ್ದೇಶಕರೊಬ್ಬರು ಬಂದು ಸಿನಿಮಾ ಕಥೆ ಹೇಳಿದರು. ಅದರಲ್ಲಿ ಕಿಸ್ ದೃಶ್ಯ ಇತ್ತು. ನಾನು ಮಾಡಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ನಟಿ ಮಾತನಾಡಿದ್ದಾರೆ.