ವಿಟಿಯು ಪರೀಕ್ಷೆ: ಸಹ್ಯಾದ್ರಿ ವಿದ್ಯಾರ್ಥಿಗಳ Rank ಸಾಧನೆ
ವಿಟಿಯು ಪರೀಕ್ಷೆ: ಸಹ್ಯಾದ್ರಿ ವಿದ್ಯಾರ್ಥಿಗಳ Rank ಸಾಧನೆ
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಆಯೋಜಿಸಿದ ಪರೀಕ್ಷೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು Rank ಗಳಿಸುವ ಮೂಲಕ ಸಾಧನೆ ಮೆರೆದಿದ್ದಾರೆ.
ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಶ್ರೀಮತಿ ಆಕಾಂಕ್ಷ ಸೋನಿ ಅವರು ಎರಡನೇ Rank ಪಡೆದುಕೊಂಡಿದ್ದಾರೆ. ಕ್ಯಾಂಪಸ್ ನೇಮಕಾತಿ ಡ್ರೈವ್ ಮೂಲಕ ಥಾಟ್ ಫೋಕಸ್‌ನಿಂದ ಅವರು ನೇಮಕಗೊಂಡು ಸಾಧನೆ ಮಾಡಿದ್ದಾರೆ.
ಹಾವಿನ ಕಚ್ಚುವಿಕೆಯ ಗುರುತು ಬಳಸಿ ಹಾವಿನ ಗುರುತಿಸುವಿಕೆ ಬಗ್ಗೆ ಸೋನಿ ಅವರು ಡಿವೈನ್ ಇಂಟರ್‌ನ್ಯಾಷನಲ್ ಅಕಾಡೆಮಿಯಲ್ಲಿ ತಮ್ಮ ಪಿಯು ಶಿಕ್ಷಣ ಪಡೆದಿದ್ದರು.
ಇದೇ ವೇಳೆ, ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿನಿ ಕಾರ್ಮೆಲಿನ್ ಡಿ ಫರ್ನಾಂಡಿಸ್ 5ನೇ Rank ಗಳಿಸಿದ್ದಾರೆ. ಸ್ಟ್ರಕ್ಚರಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಯಶಸ್ವೀ ಎಂಜಿನಿಯರ್ ಆಗಿ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂಬುದು ಕಾರ್ಮೆಲಿನ್ ಮಹದಾಸೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಶಿಕ್ಷಕ ಸಮುದಾಯ ಅಭಿನಂದನೆ ವ್ಯಕ್ತಪಡಿಸಿದೆ.