ಚಲಿಸುತ್ತಿದ್ದ ಬಸ್ ನಲ್ಲೇ ಕಂಡೆಕ್ಟರ್ ಕಾಮದಾಟ: ವೀಡಿಯೋ ಚಿತ್ರೀಕರಿಸಿದ ಪ್ರಯಾಣಿಕರು
Sunday, July 2, 2023
ಲಕ್ನೋ: ಬಸ್ ಕಂಡೆಕ್ಟರ್ ಒಬ್ಬನು ಚಲಿಸುತ್ತಿದ್ದ ಬಸ್ ನಲ್ಲೇ ಮಹಿಳೆಯೊಂದಿಗೆ ಕಾಮದಾಟ ನಡೆಸಿ ಸಿಕ್ಕಿಬಿದ್ದು, ಕೆಲಸ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಹತ್ರಾಸ್ ಡಿಪೋದ ಬಸ್ ಲಕ್ನೋ ಕಡೆಗೆ ಸಂಚರಿಸುತ್ತಿತ್ತು. ಕಂಡಕ್ಟರ್ ಮಹಿಳೆಯೊಂದಿಗೆ ಕಾಮದಾಟ ನಡೆಸುತ್ತಿರುವುದನ್ನು ಪ್ರಯಾಣಿಕರು ಕೆಲಕಾಲ ಗಮನಿಸಿದ್ದಾರೆ. ಈ ವಿಚಾರ ಕಂಡಕ್ಟರ್ ಗಮನಕ್ಕೆ ಬಂದಿರಲಿಲ್ಲ. ಪ್ರಯಾಣಿಕರು ಇದರ ವೀಡಿಯೋ ಕೂಡ ಮಾಡಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಕಂಡಕ್ಟರ್ ಹಾಗೂ ಮಹಿಳೆ ಕಂಬಳಿ ಹೊದ್ದುಕೊಂಡು ಸೆಕ್ಸ್ ಮಾಡುತ್ತಿದ್ದರು. ಈ ವೇಳೆ ಕಂಡಕ್ಟರ್ ದುವರ್ತನೆಯನ್ನು ಕಂಡು ಸಹ ಪ್ರಯಾಣಿಕರು ಸೀಟ್ ಬಳಿ ತೆರಳಿದ್ದಾರೆ. ಆಗ ಕಂಡಕ್ಟರ್ ಕಾಮದಾಟದಲ್ಲಿ ತೊಡಗಿರುವುದು ಬಯಲಾಗಿದೆ. ಆದರೆ ಯಾವಾಗ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ವೀಡಿಯೋ ಮಾಡಲು ತೊಡಗಿದ್ದಾರೋ ಆಗ ಎಚ್ಚರಗೊಂಡ ಕಂಡಕ್ಟರ್ ಕಂಬಳಿಯಿಂದ ತನ್ನ ಮಾನ ಮುಚ್ಚಿಕೊಂಡು ಗೊಂದಲಕ್ಕೆ ಒಳಗಾಗಿದ್ದಾನೆ. ಅಲ್ಲದೆ ವೀಡಿಯೋ ಮಾಡುತ್ತಿದ್ದವರ ಮೊಬೈಲ್ ಕಿತ್ತುಕೊಳ್ಳಲು ಮುಂದಾಗಿದ್ದಾನೆ. ಪರಿಣಾಮ ಕಂಡಕ್ಟರ್ ಹಾಗೂ ಪ್ರಯಾಣಿಕರ ಮಧ್ಯೆ ವಾಗ್ವಾದ ನಡೆದಿದೆ.
ಮಾತಿನ ಚಕಮಕಿಯ ವೇಳೆ ಪ್ರಯಾಣಿಕರೊಬ್ಬರು ಸುಮಾರು ಒಂದು ಗಂಟೆಗಳಿಂದ ಕಂಡಕ್ಟರ್ ಕಾಮದಾಟದಲ್ಲಿ ತೊಡಗಿದ್ದಾನೆ ಎಂದು ಹೇಳುವುದು ವೀಡಿಯೋದಲ್ಲಿ ಕೇಳಿ ಬರುತ್ತದೆ. ಇದೀಗ ಕಂಡೆಕ್ಟರ್ ಅನ್ನು ಕೆಲಸದಿಂದ ವಜಾ ಮಾಡಿರುವುದಾಗಿ ತಿಳಿದು ಬಂದಿದೆ.