ಪತ್ತಿ ಮತ್ತೊಬ್ಬಾಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡುತ್ತಿದ್ದಾಗಲೇ ಪತ್ನಿ ಎಂಟ್ರಿ: ಮುಂದಾಗಿದ್ದೇ ಭಯಾನಕ ಘಟನೆ
ರಾಜಸ್ಥಾನ(ಜೋಧಪುರ್): ಪತಿ ಮತ್ತೊಬ್ಬಾಕೆಯೊಂದಿಗೆ ಲೈಂಗಿಕ ಸಂಪರ್ಕ ಮಾಡುತ್ತಿರುವುದನ್ನು ಕಣ್ಣಾರೆ ಕಂಡು ಮನನೊಂದ ಪತ್ನಿಯೊಬ್ಬಳು ತನ್ನಿಬ್ಬರು ಮಕ್ಕಳೊಂದಿಗೆ ಸರಕು ಸಾಗಾಟದ ರೈಲಿನಡಿ ಹಾರಿದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟ ಘಟನೆ ರಾಜಸ್ಥಾನದ ಜೋಧ್ ಪುರದಲ್ಲಿ ನಡೆದಿದೆ.
ತನ್ನ ತವರು ಮನೆಯಲ್ಲಿ ವಾಸವಾಗಿದ್ದ ಮಹಿಳೆ, ಹಲವು ಬಾರಿ ಪತಿಗೆ ಕರೆ ಮಾಡಿದ್ದರೂ ಆತ ಕರೆ ಸ್ವೀಕರಿಸಿರಲಿಲ್ಲ. ಆದ್ದರಿಂದ ಆಕೆ ತನ್ನಿಬ್ಬರು ಮಕ್ಕಳೊಂದಿಗೆ ಪತಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಲು ಜೋಧಪುರಕ್ಕೆ ಆಗಮಿಸಿದ್ದಳು. ಆದರೆ ಪತಿ ಮನೆಗೆ ತಲುಪುತ್ತಿದ್ದಂತೆ ಆಕೆ ಆಘಾತಗೊಳ್ಳುವ ಘಟನೆ ನಡೆದಿದೆ. ಮನೆಯೊಳಗೆ ಹೋಗುತ್ತಿದಂತೆ ಪತಿ ಮತ್ತೊಬ್ಬ ಯುವತಿಯೊಂದಿಗೆ ಲೈಂಗಿಕ ಸಂಪರ್ಕದಲ್ಲಿದುವುದನ್ನು ಕಣ್ಣಾರೆ ಕಂಡಿದ್ದಾಳೆ. ಆಕೆ ತಕ್ಷಣ ಮೊಬೈಲ್ ನಲ್ಲಿ ಪತಿಯ ಅನೈತಿಕ ಚಟುವಟಿಕೆಯ ವೀಡಿಯೋವನ್ನು ಚಿತ್ರೀಕರಣ ಮಾಡಿದ್ದಾಳೆ. ಅದನ್ನು ಅತ್ತೆಗೂ ಶೇರ್ ಮಾಡಿದ್ದಾಳೆ.
ಪತಿ ಮತ್ತೊಬ್ಬಾಕೆಯೊಂದಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದ್ದರಿಂದ ಆಕ್ರೋಶಗೊಂಡ ಪತ್ನಿ ತನ್ನಿಬ್ಬರು ಮಕ್ಕಳೊಂದಿಗೆ ರೈಲ್ವೆ ನಿಲ್ದಾಣಕ್ಕೆ ಬಂದು ಸರಕು ಸಾಗಾಟದ ರೈಲು ಸಂಚಾರದಲ್ಲಿದ್ದ ವೇಳೆ ಹಾರಿಬಿಟ್ಟಿದ್ದಾಳೆ. ತಕ್ಷಣ ಗೂಡ್ಸ್ ರೈಲನ್ನು ನಿಲ್ಲಿಸಲಾಗಿದ್ದರೂ ಮಹಿಳೆ ಮತ್ತು ಇಬ್ಬರು ಮಕ್ಕಳ ದೇಹ ಛಿದ್ರಛಿದ್ರವಾಗಿ ಹೋಗಿತ್ತು. ಮೃತದೇಹದ ತುಂಡುಗಳನ್ನು ಒಟ್ಟುಗೂಡಿಸಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಪತಿಗಾಗಿ ಶೋಧ ಕಾರ್ಯ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.