ಒಳ ಉಡುಪಿನೊಳಗೆ ಐದು ಜೀವಂತ ಹಾವುಗಳನ್ನು ಸಾಗಿಸುತ್ತಿದ್ದ ಯುವತಿ ವಿಮಾನನಿಲ್ದಾಣದಲ್ಲಿ ಸಿಕ್ಕಿಬಿದ್ಳು
Tuesday, July 18, 2023
ಬೀಜಿಂಗ್: ಒಳ ಉಡುಪಿನೊಳಗೆ ಹಾವುಗಳನ್ನು ಕದ್ದು ಸಾಗಿಸುತ್ತಿದ್ದ ಯುವತಿಯೊಬ್ಬಳು ಕಸ್ಟಮ್ಸ್ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವಿಚಿತ್ರ ಘಟನೆಯೊಂದು ದಕ್ಷಿಣ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಫ್ಯೂಟಿಯನ್ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಯುವತಿಯ ಅಸಾಮಾನ್ಯ ದೇಹದ ರಚನೆಯನ್ನು ನೋಡಿ ಅನುಮಾನಗೊಂಡ ಅಧಿಕಾರಿಗಳು ಆಕೆಯನ್ನು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಆಕೆಯ ಬ್ರಾದೊಳಗೆ ವಿಷಕಾರಿಯಲ್ಲದ ಐದು ಕಾರ್ನ್ ಸ್ನೇಕ್ಸ್ ಪತ್ತೆಯಾಗಿವೆ. ಯುವತಿಯ ಗುರುತನ್ನು ಬಹಿರಂಗಗೊಳಿಸಿಲ್ಲ. ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವತಿ ಬಳಿ ಇದ್ದ ಹಾವುಗಳು ಯಾವುದೇ ಪರಿಸರಕ್ಕೆ ಬಹಳ ಬೇಗ ಹೊಂದಿಕೊಳ್ಳಬಹುದಾಗಿದೆ. ಅಲ್ಲದೆ ವಿವಿಧ ಪರಿಸರವನ್ನು ಸಹಿಸಿಕೊಳ್ಳಬಲ್ಲವು. ಸುರಂಗಗಳು, ಎಲೆಗಳ ಕಸ, ಗುಹೆಗಳು, ಮರದ ಟೊಳ್ಳುಗಳು, ಬಂಡೆಗಳು, ಸಸ್ಯವರ್ಗದ ಗುಂಪುಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ.
ಈ ಘಟನೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ನಡೆದ ಮತ್ತೊಂದು ಪ್ರಕರಣಕ್ಕೆ ಹೋಲುತ್ತದೆ. ಕಳ್ಳಸಾಗಾಣಿಕೆದಾರರು ಹಾವು ಮಾತ್ರವಲ್ಲದೆ ಕೋತಿ ಮತ್ತು ಆಮೆಯನ್ನು ಚೀಲದಲ್ಲಿ ಸಾಗಿಸುತ್ತಿರುವುದು ಕಂಡುಬಂದಿತ್ತು. ಲಗೇಜ್ನಲ್ಲಿ 45 ಬಾಲ್ ಹೆಬ್ಬಾವುಗಳು, ಮೂರು ಮರ್ಮೊಸೆಟ್ ಮಂಗಗಳು, ಮೂರು ನಕ್ಷತ್ರ ಆಮೆಗಳು ಮತ್ತು ನಾಲ್ಕು ಕೋನ್ ಹಾವುಗಳು ಪತ್ತೆಯಾಗಿದ್ದವು.