ಪ್ರೀತಿಗೆ ಮನೆಯಲ್ಲಿ ಒಪ್ಪಿಗೆ ಸಿಗೋಲ್ಲವೆಂಬ ಭೀತಿ: ಪ್ರಿಯಕರನ ಮನೆಯಲ್ಲಿ ನಡೆಯಿತು ಘನಘೋರ ಕೃತ್ಯ
Wednesday, July 12, 2023
ಸಿದ್ದಿಪೇಟ್: ಪ್ರೀತಿಗೆ ಹಿರಿಯರಿಂದ ಒಪ್ಪಿಗೆ ದೊರಕುವುದಿಲ್ಲವೆಂಬ ಭಯದಲ್ಲಿ ಪ್ರೇಮಿಗಳಿಬ್ಬರು ಸಾವಿನ ಶರಣಾರುವ ಘಟನೆ ತೆಲಂಗಾಣದ ಸಿದ್ದಿಪೇಟೆ ಜಿಲ್ಲೆ ದುಬ್ಬಾಕ ಮಂಡಲದ ಲಟ್ಟಾಪೇಟೆಯಲ್ಲಿ ನಡೆದಿದೆ.
ದುಬ್ಬಾಕ ಮಂಡಲದ ಜೂನಿಯರ್ ಕಾಲೇಜಿನ ಪಿಯು ವಿದ್ಯಾರ್ಥಿಳಾದ ಕರುಪಾತಿ ಭಗೀರಥ (17) ಮತ್ತು ಥೋಡ್ತಾ ನೇಹಾ (16) ಮೃತಪ್ರೇಮಿಗಳು. ಇಬ್ಬರು ಲಟ್ಟಾಪೇಟೆಯಲ್ಲಿ ನೇಣು ಬಿಗಿದು ಸಾವಿಗೆ ಶರಣಾಗಿದ್ದಾರೆ.
ಇಬ್ಬರು ಪ್ರೀತಿಯ ಬಲೆಗೆ ಬಿದ್ದಿದ್ದರು. ಆದರೆ, ತಮ್ಮ ಪ್ರೀತಿಗೆ ಹಿರಿಯರು ಒಪ್ಪಿಗೆ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಇಬ್ಬರು ಬೇರೆಯಾಗುತ್ತೇವೆ ಎಂಬ ಭಯ ಇಬ್ಬರಲ್ಲೂ ಕಾಡುತ್ತಿತ್ತು. ಇದೇ ಭಯದಲ್ಲಿ ದುಡುಕಿನ ನಿರ್ಧಾರ ತೆಗೆದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಗಳವಾರ ಸಂಜೆ ಭಗೀರಥನ ಪಾಲಕರು ಮನೆಯಿಂದ ಹೊರ ಹೋಗಿದ್ದ ಸಂದರ್ಭ ಆತನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೃತದೇಹಗಳನ್ನು ದುಬ್ಬಾಕಾದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ಪಾಲಕರಿಗೆ ಹಸ್ತಾಂತರ ಮಾಡಿದ್ದಾರೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.