ಪ್ರೀತಿಸಿ ಓಡಿಹೋಗಿ ಮದುವೆಯಾದ ಪುತ್ರಿ: ಮನನೊಂದು ತಾಯಿ ನೇಣಿಗೆ ಶರಣು
Thursday, July 6, 2023
ಗದಗ: ಯುವಕನನ್ನು ಪ್ರೀತಿಸಿ ಮನೆತೊರೆದು ಅತನೊಂದಿಗೆ ಮದುವೆಯಾಗಿರುವ ಯುವತಿಯ ತಾಯಿ ತೀವ್ರವಾಗಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.
ಶಿರೋಳ ಗ್ರಾಮದಲ್ಲಿ ಅಂಗನವಾಡಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಸುನೀತಾ ನಾಯಕವಾಡಿ (48) ಆತ್ಮಹತ್ಯೆ ಮಾಡಿಕೊಂಡ ತಾಯಿ.
ಸುನೀತಾ ನಾಯಕವಾಡಿಯವರ ಪುತ್ರಿ ಸುಷ್ಮಾ ಅದೇ ಗ್ರಾಮದ ಪರಯ್ಯ ಹಿರೇಮಠ ಎನ್ನುವ ಯುವಕನನ್ನು ಪ್ರೀತಿಸುತ್ತಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆ ಮನೆ ತೊರೆದು ಆತನನ್ನು ಮದುವೆಯಾಗಿದ್ದಳು. ಪ್ರೇಮ ವಿವಾಹವಾದ ಬಳಿಕ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಳು.
ಪುತ್ರಿ ಓಡಿಹೋಗಿ ಮದುವೆಯಾಗಿದ್ದರಿಂದ ತೀವ್ರವಾಗಿ ನೊಂದು, ಜೀವನದಲ್ಲಿ ಜಿಗುಪ್ಸೆಗೊಂಡ ಈಕೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.