
50 ಸಾವಿರ ಶಾಲಾ ಶಿಕ್ಷಕರ ಕೊರತೆ- 13 ಸಾವಿರ ಶಿಕ್ಷಕರ ನೇಮಕ- ಸಚಿವ ಮಧು ಬಂಗಾರಪ್ಪ
50 ಸಾವಿರ ಶಾಲಾ ಶಿಕ್ಷಕರ ಕೊರತೆ- 13 ಸಾವಿರ ಶಿಕ್ಷಕರ ನೇಮಕ- ಸಚಿವ ಮಧು ಬಂಗಾರಪ್ಪ
ರಾಜ್ಯದಲ್ಲಿ 50 ಸಾವಿರ ಶಾಲಾ ಶಿಕ್ಷಕರ ಕೊರತೆ ಇದೆ. ಎಲ್ಲವನ್ನೂ ಏಕಕಾಲಕ್ಕೆ ಭರ್ತಿ ಮಾಡಲು ಕಾನೂನಿನ ತೊಡಕು ಇದೆ. ಆದರೆ, 13 ಸಾವಿರದಷ್ಟು ಶಿಕ್ಷಕರ ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದೆ.
ಈ ವಿಷಯ ಪ್ರಕಟಿಸಿದ ಪ್ರಾಥಮಿಕ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಲಾ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್‌ನ್ನು ಕಡಿಮೆ ಅವಧಿಯಲ್ಲಿ ಪೂರೈಸಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯದ್ದೇ ಆದ ಶಿಕ್ಷಣ ನೀತಿಯನ್ನು ತರುತ್ತೇವೆ. ಇದಕ್ಕಾಗಿ ತಜ್ಞರ ಸಮಿತಿಯನ್ನು ರಚಿಸಲಿದ್ದೇವೆ. ಆಗಸ್ಟ್ 2ರ ಬಳಿಕ ಉನ್ನತ ಶಿಕ್ಷಣ ಸಚಿವರು ಮತ್ತು ಮುಖ್ಯಮಂತ್ರಿಗಳ ಜೊತೆಗೆ ಮಾತುಕತೆ ನಡೆಸಿದ ಈ ಬಗ್ಗೆ ಸ್ಪಷ್ಟ ರೂಪ ನೀಡಲಿದ್ದೇವೆ ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಉತ್ತಮ ಪಡಿಸುವುದು, ಶಿಕ್ಷಕರ ನೇಮಕಾತಿಯನ್ನು ಮಾಡುವುದು, ನವೋದಯ, ಕರ್ನಾಟಕ ಪಬ್ಲಿಕ್ ಶಾಲೆಗಳಂತಹ ಶಿಕ್ಷಣ ಕೇಂದ್ರಗಳನ್ನು ಹೆಚ್ಚಿಸಲು ಒತ್ತು ನೀಡುವುದು ಪ್ರಮುಖ ಅಂಶ. ಅದೇ ರೀತಿ, ಅರಣ್ಯ ಇಲಾಖೆ ಜೊತೆಗೆ ಸೇರಿ ಮಕ್ಕಳಿಂದಲೇ 50 ಲಕ್ಷ ಸಸಿಗಳನ್ನು ನಡೆಉವ ಮಹತ್ವದ ಯೋಜನೆ ಹಾಕಿಕೊಂಡಿದ್ದೇವೆ ಎಂದು ಸಚಿವರು ಹೇಳಿದರು.