-->
TIMES NOW SURVEY: 2024ರಲ್ಲಿ ಕೇಂದ್ರ ಗದ್ದುಗೆ ಯಾರಿಗೆ..? ಅಚ್ಚರಿಯ ಫಲಿತಾಂಶ ದೊರೆಯುವುದೇ..?

TIMES NOW SURVEY: 2024ರಲ್ಲಿ ಕೇಂದ್ರ ಗದ್ದುಗೆ ಯಾರಿಗೆ..? ಅಚ್ಚರಿಯ ಫಲಿತಾಂಶ ದೊರೆಯುವುದೇ..?

TIMES NOW SURVEY: 2024ರಲ್ಲಿ ಕೇಂದ್ರ ಗದ್ದುಗೆ ಯಾರಿಗೆ..? ಅಚ್ಚರಿಯ ಫಲಿತಾಂಶ ದೊರೆಯುವುದೇ..?





2024ರ ಮಹಾ ಚುನಾವಣೆಗೆ ಈಗ ರಾಜಕೀಯ ಪಕ್ಷಗಳು ಸಜ್ಜಾಗುತ್ತಿವೆ. ಪ್ರತಿಪಕ್ಷಗಳ ಮಹಾ ಮೈತ್ರಿಕೂಟಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು, ಪಾಟ್ನಾ ಸಭೆಯ ಬಳಿಕ ಈಗ ಬೆಂಗಳೂರಿನ ಎರಡನೇ ಸಭೆಯತ್ತ ರಾಜಕೀಯ ಪಂಡಿತರ ದೃಷ್ಟಿ ನಟ್ಟಿದೆ.



ಈ ಮಧ್ಯೆ, ಕೇಂದ್ರದಲ್ಲಿ ಅಧಿಕಾರ ಹಿಡಿಯುವವರು ಯಾರು ಎಂಬ ಯಕ್ಷ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಪ್ರತಿಷ್ಠಿತ TIMES NOW ಸಂಸ್ಥೆ ತನ್ನ SURVEY ಮೂಲಕ ನಡೆಸಿದೆ.



ತಕ್ಷಣಕ್ಕೆ ಚುನಾವಣೆ ಘೋಷಣೆಯಾದರೆ ಯಾರು ಮುಂಚೂಣಿಯಲ್ಲಿ ಇರಬಹುದು..? ಯಾರಿಗೆ ಎಷ್ಟು ಸೀಟು ದೊರೆಯಬಹುದು ಎಂಬ ಲೆಕ್ಕಾಚಾರವನ್ನು ಈ ಸರ್ವೇ ನಡೆಸಿದೆ.



ಈಗ ಸ್ಥಾಪನೆಯಾಗಲು ಸಜ್ಜಾಗಿರುವ ಪೀಪಲ್ಸ್ ಡೆಮಾಕ್ರಟಿಕ್ ಅಲಯನ್ಸ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮಧ್ಯೆ ನೇರ ಹಣಾಹಣಿ ನಡೆಯುವ ಸಾಧ್ಯತೆಯ ಮುನ್ಸೂಚನೆಯನ್ನು ಈ ಸರ್ವೇ ನೀಡಿದೆ.



ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಪಾಳಯ ತನ್ನ ಜನಪ್ರಿಯತೆಯನ್ನು ಕಾಯ್ದಿಟ್ಟುಕೊಂಡಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಸಮಾನ ನಾಗರಿಕ ಸಂಹಿತೆ ಈ ಬಾರಿಯ ಚುನಾವಣಾ ವಿಷಯವನ್ನಾಗಿ ಬಿಜೆಪಿ ಮಾಡುತ್ತಿರುವುದು ಸ್ಪಷ್ಟ ಎಂಬುದನ್ನು ಸರ್ವೇ ಸ್ಪಷ್ಟಪಡಿಸಿದೆ.


ಅಂದಾಜು ಗಳಿಸಬಹುದಾದ ಕ್ಷೇತ್ರಗಳ ಸಂಖ್ಯೆ:

ಬಿಜೆಪಿ ಮೈತ್ರಿಕೂಟ: 285 - 325

Congress : 111- 149

TMC L 20-22

YSRPC: 24-25

BJD: 12-14

BRS : 9-11

AAP: 4-7

SP : 4-8

OTHERS: 18=38


ಮತಗಳಿಕೆಯ ಅಂದಾಜು ಪ್ರಮಾಣ

ಬಿಜೆಪಿ ಮೈತ್ರಿಕೂಟ: 33.08%

ಕಾಂಗ್ರೆಸ್ : 28.82%

ಇತರರು : 33.10%


ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟಗಳು ಕೂದಲೆಳೆಯ ಅಂತರದ ತುರುಸಿನ ಸ್ಪರ್ಧೆಯನ್ನು ನೀಡಬಹುದು ಎಂದು ಅಂದಾಜಿಸಲಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ಪಾರಮ್ಯ ಮೆರೆಯುವ ಸಾಧ್ಯತೆ ಇದೆ. ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶದಲ್ಲಿ ಬಿಜೆಪಿ ಮೇಲುಗೈ ಸಾಧಿಸಬಹುದು. ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರಗಳಲ್ಲಿ ಬಿಜೆಪಿ ಕೆಲವೊಂದು ಸ್ಥಾನಗಳಲ್ಲಿ ಹಿನ್ನಡೆ ಅನುಭವಿಸಬಹುದು. 

Ads on article

Advertise in articles 1

advertising articles 2

Advertise under the article