ಮಂಗಳೂರು: ಸಂಚಾರದಲ್ಲಿದ್ದ ರೈಲು ಹತ್ತಲು ಹೋಗಿ ನೇತಾಡಿಕೊಂಡೇ ಹೋದ ವೃದ್ಧ
Saturday, July 29, 2023
ಮಂಗಳೂರು: ಸಂಚಾರದಲ್ಲಿದ್ದ ರೈಲು ಹತ್ತಲು ಹೋಗಿ ಆಯತಪ್ಪಿ ಬೀಳಲಿದ್ದ ಹಿರಿಯ ನಾಗರಿಕರೊಬ್ಬರನ್ನು ಪೊಲೀಸ್ ಸಿಬ್ಬಂದಿ ರಕ್ಷಿಸಿ ಸಮಯಪ್ರಜ್ಞೆ ಮೆರೆದ ಘಟನೆ ಮಂಗಳೂರು ನಗರದ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಕಣ್ಣೂರಿನ ವಯಲ್‌ವೀಡು ಮೂಲದ ಶಂಕರ್ ಬಾಬು(70) ರಕ್ಷಣೆಗೊಳಗಾದ ವ್ಯಕ್ತಿ.
ಶಂಕರಬಾಬು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಿಂದ ಗುರುವಾರ ಸಂಜೆ 6.15ರ ವೇಳೆ ಮಲಬಾರ್ ಎಕ್ಸ್‌ಪ್ರೆಸ್ ರೈಲು ಸಂಚಾರದಲ್ಲಿದ್ದಾಗಲೇ ಹತ್ತಿದ್ದಾರೆ. ಆದರೆ ಅಷ್ಟರಲ್ಲಾಗಲೇ ರೈಲು ವೇಗ ಪಡೆದ ಕಾರಣ ಅವರು ರೈಲಿನ ಎಸ್-6 ಕೋಚ್‌ಗೆ ಹತ್ತಲು ಸಾಧ್ಯವಾಗದೆ ಹ್ಯಾಂಡಲ್‌ನಲ್ಲಿ ನೇತಾಡುತ್ತ ಅನತಿ ದೂರದವರೆಗೆ ಸಾಗಿದ್ದಾರೆ. ಇದನ್ನು ಗಮನಿಸಿದ ಆರ್‌ಪಿಎಫ್ ಸಿಬ್ಬಂದಿ ಪ್ರಕಾಶ್ ತಕ್ಷಣ ಧಾವಿಸಿ ಬಂದು ಶಂಕರ್ ಬಾಬು ಅವರನ್ನು ರಕ್ಷಿಸಿದ್ದಾರೆ.
ಸ್ವಲ್ಪ ತಡವಾಗುತ್ತಿದ್ದರೂ ಶಂಕರಬಾಬುರವರು ರೈಲ್ವೆಹಳಿ ಹಾಗೂ ರೈಲಿನ ನಡುವೆ ಸಿಲುಕಿ ಪರಿಸ್ಥಿತಿ ಗಂಭೀರತೆಗೆ ತಲುಪುವ ಸಾಧ್ಯತೆಯಿತ್ತು. ಆದರೆ ಇದೀಗ ಅವರು ಬಲಗಾಲಿನ ಬೆರಳಿಗೆ ಅಲ್ಪಸ್ವಲ್ಪ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರ್‌ಪಿಎಫ್ ಸಿಬ್ಬಂದಿ ಪ್ರಕಾಶ್ ರವರ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.