UDUPI ಶೌಚಾಲಯದಲ್ಲಿ ಮೊಬೈಲ್ ಪ್ರಕರಣ- ರಶ್ಮಿ ಸಾವಂತ್ ಟ್ವೀಟ್ ಸಂಚಲನ
Wednesday, July 26, 2023
ಉಡುಪಿ: ಉಡುಪಿಯ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ವಾಸ್ ರೂಮ್‌ನಲ್ಲಿ ಇರುವಾಗ ವಿದ್ಯಾರ್ಥಿನಿ ವಿಡಿಯೋ ಚಿತ್ರೀಕರಣ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲ ಮೂಲದ, ಇಂಗ್ಲೆಡ್‌ನ ಆಫ್ ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷೆ ರಶ್ಮಿ
ಸಾಮಂತ ಮೂವರು ವಿದ್ಯಾರ್ಥಿನಿಯರ ಹೆಸರು ಹಾಕಿ ಸೋಮವಾರ ಮಾಡಿದ ಟ್ವಿಟ್ ಪ್ರಕರಣಕ್ಕೆ ತಿರುವು ನೀಡಿದೆ.
ಸೋಮವಾರ ರಾತ್ರಿ ಮಣಿಪಾಲ, ಮಲ್ಪೆ ಪೊಲೀಸರು ಮಣಿಪಾಲದಲ್ಲಿರುವ ನಿವಾಸಕ್ಕೆ ತೆರಳಿ ಮಾಹಿತಿ ಪಡೆದ ವಿಷಯ ಹೆಚ್ಚು ವ್ಯಾಪಕವಾಗಿ
ಪ್ರಕರಣವನ್ನು ಮತ್ತಷ್ಟು ಕೆದಕುವಂತಾಗಿದೆ.
ರಾಜ್ಯ ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಮಾಡುವಷ್ಟು ಪ್ರಕರಣಕ್ಕೆ ಕಾವು ದೊರಕಿದೆ. ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಮಂಗಳವಾರ ರಶ್ಮಿ ಸಾಮಂತ್ ಅವರ ಮಣಿಪಾಲ ನಿವಾಸಕ್ಕೆ ಭೇಟಿ ನೀಡಿ ಹೆತ್ತವರಿಗೆ ಧೈರ್ಯ ತುಂಬಿದರು. ಮುಂಬಯಿಯಲ್ಲಿರುವ ರಶ್ಮಿ ಸಾಮಂತ್ ಪ್ರತಿಕ್ರಿಯೆ ನಿಟ್ಟಿನಲ್ಲಿ ಸಂಪರ್ಕಕ್ಕೆ ದೊರೆತಿಲ್ಲ.
ರಶ್ಮಿ ಸಾವಂತ್ ಯಾರು?
ಉಡುಪಿ ಜಿಲ್ಲೆಯವರಾದ ರಶ್ಮಿಸಾಮಂತ್ ಅವರು ಈ ಹಿಂದೆಯೂ ತಾನು ಹಾಕಿದ ಪೋಸ್ಟ್‌ಗಳಿಂದ ವಿವಾದಕ್ಕೆ ಗುರಿಯಾಗಿದ್ದರು. 2021 ರಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ಅಲ್ಪಾವಧಿಯಲ್ಲೇ ಯೆಹೂದಿ ವಿರೋಧಿ, ಜನಾಂಗೀಯವಾದಿ ಮತ್ತು ಟ್ರಾನ್ಸ್‌ಫೋಬಿಕ್ ಪೋಸ್ಟ್ ಗಳನ್ನು ಮಾಡಿದ್ದರು. ಅದರ ಬೆನ್ನಲ್ಲೇ ಅವರು ಸಂಘದ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಬೇಕಾಗಿತ್ತು.