-->
ಹಿಮ್ಮುಖ ಚಲನೆಯಲ್ಲಿರುವ ಶುಕ್ರ..! ಈ ನಾಲ್ಕು ರಾಶಿಯವರಿಗೆ ಆಪತ್ತು ತಪ್ಪಿದ್ದಲ್ಲ..!

ಹಿಮ್ಮುಖ ಚಲನೆಯಲ್ಲಿರುವ ಶುಕ್ರ..! ಈ ನಾಲ್ಕು ರಾಶಿಯವರಿಗೆ ಆಪತ್ತು ತಪ್ಪಿದ್ದಲ್ಲ..!

 



 

 

ಜುಲೈ 23 ರಂದು ಶುಕ್ರನು ಸಿಂಹ ರಾಶಿಗೆ ತನ್ನ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಸಿಂಹ ರಾಶಿಯಿಂದ ಶುಕ್ರನ ಹಿಮ್ಮುಖ ಚಲನೆಯಿಂದ 4 ನಾಲ್ಕುರಾಶಿಗಳು ಸಾಕಷ್ಟು ತೊಂದರೆಗೆ ಒಳಗಾಗುವುದು. ಶುಕ್ರನ ಹಿಮ್ಮುಖ ಚಲನೆಯಿಂದ ಸಮಸ್ಯೆಗೆ ಒಳಗಾಗುವ ನಾಲ್ಕು ರಾಶಿ ಚಿಹ್ನೆಗಳಾವುವು..?

 

ಗ್ರಹಗಳ ಚಲನೆಯು ಕೆಲವು ಬಾರಿ ಉತ್ತಮ ಬದಲಾವಣೆಯನ್ನು ಹಾಗೂ ಇನ್ನೂ ಕೆಲವು ಬಾರಿ ಕೆಟ್ಟ ಪ್ರಭಾವವನ್ನು ನೀಡಲಿದೆ. ಶುಕ್ರನು ಪ್ರೀತಿ, ಸೌಂದರ್ಯ, ಕಲೆ, ಪ್ರಣಯ ಮತ್ತು ವಿವಾಹಗೆ ಸಂಬಂಧಿಸಿದ ವಿಷಯಗಳ ಮೇಲೆ ಹೆಚ್ಚಿನ ಪ್ರಭಾವ ನೀಡುವನು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ  ಶುಕ್ರನು 2023 ಜುಲೈ 23 ರಂದು ಸಿಂಹ ರಾಶಿಯಿಂದ ಹಿಮ್ಮುಖ ಚಲನೆಯನ್ನು ಆರಂಭಿಸಿದ್ದಾನೆ. ಇದು ದ್ವಾದಶ ರಾಶಿಗಳ ಮೇಲೆ ಗಮನಾರ್ಹ ಋಣಾತ್ಮಕ ಪ್ರಭಾವ ಬೀರುವುದು ಎಂದು ಹೇಳಲಾಗಿದೆ. ಶುಕ್ರನ ಪ್ರಭಾವವು ಕೆಲವು ರಾಶಿಯವರಿಗೆ ಹೆಚ್ಚಿನ  ಸಮಸ್ಯೆಯನ್ನುಂಟು ಮಾಡುವುದು. ಹಾಗಾದರೆ ರಾಶಿಗಳು  ಯಾವವು? ಅವು ಎಂತಹ ತೊಂದರೆ ಎದುರಿಸಬೇಕಾಗುವುದು? ಎನ್ನುವುದನ್ನು ನೋಡೋಣ




ಮೇಷ ರಾಶಿ:
ಶುಕ್ರನು ಮೇಷ ರಾಶಿಯ 2ನೇ ಮತ್ತು 7ನೇ ಮನೆಯ ಅಧಿಪತಿ. ಶುಕ್ರನ ಹಿಮ್ಮುಖ ಚಲನೆಯು ಐದನೇ ಮನೆಯಲ್ಲಿ ಸಂಭವಿಸುವುದು. ಇದರಿಂದ ನಿಮ್ಮ ಸಂಬಂಧದಲ್ಲಿ ಹಠಾತ್ ಸಮಸ್ಯೆಗಳು ಹಾಗೂ ಬೇಸರ ಉಂಟಾಗುವ ಸಾಧ್ಯತೆಗಳು ಹೆಚ್ಚು. ಯೋಚನೆ ಮಾಡಿ ಮಾತನಾಡುವುದನ್ನು ಮರೆಯದಿರಿ. ಸಂಗಾತಿಯೊಂದಿಗೆ ಉದ್ವಿಘ್ನತೆ ಉಂಟಾಗಬಹುದು. ಅಲ್ಲದೆ ಒಂದಷ್ಟು ಹಣದ ಸಮಸ್ಯೆಯೂ ತೊಂದರೆ ತಲೆದೂರುವುದು. ಸಾಲ ಪಡೆದಿದ್ದರೆ ಅದನ್ನು ಹಿಂದಿರುಗಿಸುವುದು ಕಷ್ಟವಾಗಲಿದೆ. ನೀವು ಬಯಸಿದ ಕೆಲಸ ಕಾರ್ಯಗಳು ಮುಂದುವರಿಯದು.




.
ವೃಷಭ ರಾಶಿ:
ಶುಕ್ರನು ವೃಷಭ ರಾಶಿಯವರ 1ನೇ ಮತ್ತು  ಆರನೇ ಮನೆಯ ಅಧಿಪತಿಯಾಗಿರುತ್ತಾನೆ. ಇವರು ತಮ್ಮ ಐಷಾರಾಮಿ ಜೀವನದಲ್ಲಿ ಸಮಸ್ಯೆ ಎದುರಿಸಬೇಕಾಗುವುದು. ಬಯಸಿದ ಹಾಗೆ ಉತ್ತಮ ಸಮಯವನ್ನು ಮನೆಯವರೊಂದಿಗೆ ಕಳೆಯಲು ಆಗುವುದಿಲ್ಲ. ಲಾಭ ಪಡೆಯಲು ಹೂಡಿಕೆಗೆ ಮುಂದಾಗುವರು. ಆದರೆ ಅದರಲ್ಲಿ ಲಾಭ ಬರುವುದಿಲ್ಲ. ಕುಟುಂಬದ ವಿಷಯದಲ್ಲಿ ಹೆಚ್ಚಿನ ಹಣ ವ್ಯಯಿಸಬೇಕಾಗುವುದು. ಖರ್ಚು ಹೆಚ್ಚುವುದರೊಂದಿಗೆ ಮನೆಯಲ್ಲಿ ಕಿರಿಕಿರಿ ಉಂಟಾಗಲಿದೆ. ಸಂಗಾತಿಯೊಂದಿಗೂ ಅಸಮಧಾನ ಉಂಟಾಗುವುದು. ಸಮಸ್ಯೆ ಒಂದಾದ ನಂತರ ಒಂದರಂತೆ ಕಾಡುವುದು.

 

 

ಕನ್ಯಾ ರಾಶಿ:
ಶುಕ್ರನು ಕನ್ಯಾ ರಾಶಿಯವರ 2ನೇ ಮನೆ ಮತ್ತು ಒಂಭತ್ತನೇ ಮನೆಯ ಅಧಿಪತಿಯಾಗಿರುತ್ತಾನೆ. ಶುಕ್ರನ ಹಿಮ್ಮುಖ ಚಲನೆಯಿಂದ ಹಣಕಾಸಿನ ನಷ್ಟ ಮತ್ತು ಕುಟುಂಬ ಸಮಸ್ಯೆಯನ್ನು ಎದುರಿಸಬೇಕಾಗುವುದು. ಕನ್ಯಾ ರಾಶಿಯವರ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುವುದು. ವೃತ್ತಿ ಜೀವನದ ಬಗ್ಗೆ ಹೆಚ್ಚು ಜಾಗೃತರಾಗಿ ಇರಬೇಕು. ವೃತ್ತಿ ಜೀವನದಲ್ಲಿ ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಯೋಚಿಸಬೇಕು. ವ್ಯವಹಾರದಲ್ಲಿ ಸಮಸ್ಯೆ ಉಂಟಾಗಬಹುದು.


.
ವೃಶ್ಚಿಕ ರಾಶಿ:
ಶುಕ್ರನು ವೃಶ್ಚಿಕ ರಾಶಿಯ ಏಳನೇ ಮನೆ ಮತ್ತು ಹನ್ನೆರಡನೇ ಮನೆಯ ಅಧಿಪತಿಯಾಗಿರುತ್ತಾನೆ. ಶುಕ್ರನ ಹಿಮ್ಮುಖ ಚಲನೆಯು ವೃತ್ತಿ ಜೀವನ ಹಾಗೂ ಕುಟುಂಬ ತೊಂದರೆಗೆ ಕಾರಣವಾಗುವುದು. ಪ್ರಸ್ತುತ ಕೆಲಸವನ್ನು ಬಿಟ್ಟು ಬೇರೆ ಕೆಲಸಕ್ಕೆ ಮುಂದಾಗಬಹುದು. ಹೊಸ ಪ್ರವೃತ್ತಿಯೊಂದಿಗೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಹೆಚ್ಚಾಗುತ್ತದೆ. ಸಂಗಾತಿಯೊಂದಿಗೆ ವಾದ ಹೆಚ್ಚುವುದು. ಪ್ರೀತಿಯ ಜೀವನದಲ್ಲಿ ಬೇಸರ ಹೆಚ್ಚುವುದು. ಪದೇ ಪದೇ ಘರ್ಷಣೆ ಹೆಚ್ಚಾಗುವುದು. ಅಧಿಕ ಒತ್ತಡ ಹಾಗೂ ಬೇಸರಿಂದ ಮಾನಸಿಕವಾಗಿ ಗೊಂದಲ ಹೆಚ್ಚಾಗಲಿದೆ.




Ads on article

Advertise in articles 1

advertising articles 2

Advertise under the article