ಅಣ್ಣಾಮಲೈ ನಡೆಸಿಕೊಟ್ಟ ಸಾಮೂಹಿಕ ವಿವಾಹದಲ್ಲಿ ಎಡವಟ್ಟು- ಮದುವೆಯ ಮರುದಿನವೆ ಮಕ್ಕಳ ಹುಟ್ಟುಹಬ್ಬ ಆಚರಿಸಿದರು!- ಟ್ರೋಲ್ ( VIDEO)
Saturday, July 8, 2023
ತಮಿಳುನಾಡು : ಕರ್ನಾಟಕದ ಮಾಜಿ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ 37ನೇ ಹುಟ್ಟುಹಬ್ಬದ ಪ್ರಯುಕ್ತ ನಡೆಸಲಾದ ಸಾಮೂಹಿಕ ವಿವಾಹದಲ್ಲಿ ಎಡವಟ್ಟು ನಡೆದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಲಾಗುತ್ತಿದೆ.
ಜುಲೈ 5ರಂದು ವಿಲ್ಲುಪುರಂ ಜಿಲ್ಲೆಯ ತಿಂಡಿವನಂ ಬಳಿಯ ಒಮಂತೂರ್ ಪ್ರದೇಶದಲ್ಲಿ ಖಾಸಗಿ ಶಾಲೆಯ ಟ್ರಸ್ಟ್ ವತಿಯಿಂದ 39 ಜೋಡಿಗಳಿಗೆ ಉಚಿತ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ಜೋಡಿಗಳಿಗೆ ತಾಳಿಯನ್ನು ನೀಡಿ ಮದುವೆ ನಡೆಸಿಕೊಟ್ಟಿದ್ದರು. ಈ 36 ನವ ದಂಪತಿಗಳ ಪೈಕಿ ಕೆಲವರು ಈಗಾಗಲೇ ಮದುವೆಯಾಗಿದ್ದಾರೆ. ಕೆಲವರು ವಿವಾಹವಾಗಿ ಮಕ್ಕಳನ್ನು ಸಹ ಹೊಂದಿದ್ದರು ಎಂಬ ಟೀಕೆಗಳು ಕೇಳಿ ಬಂದಿದೆ.
ಇದೀಗ ಈ ಸಮಾರಂಭ ಕೂಡಾ ತಮಿಳುನಾಡಿನಲ್ಲಿ ಟೀಕೆಗೆ ಗುರಿಯಾಗಿದೆ. ಈ ಪರಿಸ್ಥಿತಿಯಲ್ಲಿ, ಮದುವೆಯಾದ ಮರುದಿನವೇ (ಜುಲೈ 6) ವಿವಾಹಿತ ದಂಪತಿಯ ಮಗುವಿನ ಹುಟ್ಟುಹಬ್ಬವನ್ನು ಸಹ ಆಚರಿಸಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗುತ್ತಿದೆ.
ಮದುವೆಯಾದ 39 ಜೋಡಿಗಳ ಪೈಕಿ ತಿಂಡಿವನಂನ ಗಿಡಂಗಲ್ ಪ್ರದೇಶದ ಇಬ್ಬರು ಸಹೋದರರು ಈಗಾಗಲೇ ಮದುವೆಯಾಗಿದ್ದಾರೆ ಎಂಬ ಮಾಹಿತಿ ಇದೆ. ಹಿರಿಯ ಸಹೋದರನಿಗೆ ಈಗಾಗಲೇ ಒಂದು ಮಗು ಮತ್ತು ಕಿರಿಯ ಸಹೋದರನಿಗೆ ಎರಡು ಮಕ್ಕಳಿದ್ದಾರೆ. ಈ ಬಗ್ಗೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.