ಮಂಗಳೂರಿನಲ್ಲಿ ಮನಪಾ ಸದಸ್ಯೆಯನ್ನು ನೀರಿಲ್ಲದ್ದಕ್ಕೆ ಮಹಿಳೆಯರು ತರಾಟೆಗೆ ತೆಗೆದುಕೊಂಡದ್ದು ಹೀಗೆ- ಕಾಲ್ಕಿತ ಕಾರ್ಪೊರೇಟರ್ (VIDEO ನೋಡಿ)
Tuesday, July 18, 2023
ಮಂಗಳೂರು: ನಗರದ ಉರ್ವಸ್ಟೋರ್ ಸುಂಕದಕಟ್ಟೆ ಪ್ರದೇಶದಲ್ಲಿ ಕುಡಿಯುವ ನೀರಿಲ್ಲವೆಂದು ಏರಿಯಾದ ಮಹಿಳೆಯರು ಜೊತೆಯಾಗಿ ಮಹಿಳಾ ಕಾರ್ಪೊರೇಟರ್ ಗೆ ಎರ್ರಾಬಿರ್ರಿ ಕ್ಲಾಸ್ ತೆಗೆದುಕೊಂಡಿದ್ದು ಇದರ ವಿಡಿಯೋ ವೈರಲ್ ಆಗಿದೆ.
ಮೊದಲಿಗೆ ದರ್ಪದ ಮಾತನಾಡಿದ ಮಹಿಳಾ ಕಾರ್ಪೊರೇಟರ್ ವಿಜಯಲಕ್ಷ್ಮಿ ಶೆಟ್ಟಿಯವರು ಆ ಬಳಿಕ ಮಹಿಳೆಯರ ಪ್ರಶ್ನೆಗೆ ಉತ್ತರಿಸಲಾಗದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸುಂಕದಕಟ್ಟೆ ಪ್ರದೇಶದ ಕೆಲವು ಮನೆಗಳಿಗೆ ನೀರಿನ ವಾಲ್ವ್ ಸಮಸ್ಯೆಯಿಂದ ಕಳೆದ 12 ದಿನಗಳಿಂದ ನೀರು ಬರುತ್ತಿಲ್ಲವೆಂದು ಸಾರ್ವಜನಿಕರು ಕಾರ್ಪೊರೇಟರ್ ರಲ್ಲಿ ಗೋಳು ತೋಡಿಕೊಂಡಿದ್ದಾರೆ.
ಈ ಬಗ್ಗೆ ಕ್ಷೇತ್ರದ ಶಾಸಕರು, ಮನಪಾ ಮೇಯರ್, ಮನಪಾ ಆಯುಕ್ತರಿಗೂ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಆದರೆ ಏನೂ ಪ್ರಯೋಜನವಾಗಿಲ್ಲ. ಆದ್ದರಿಂದ ಸ್ಥಳಕ್ಕೆ ಬಂದ ಕಾರ್ಪೊರೇಟರ್ ಗೆ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.
ಆದರೆ ಕಾರ್ಪೊರೇಟರ್ ಮೊದಲು ದರ್ಪದಿಂದ ಮಾತನಾಡಿದ್ದಾರೆ ಎಂಬ ರೀತಿಯಲ್ಲಿ ಮಹಿಳೆಯರು ಮಾತನಾಡಿದ್ದು ವೀಡಿಯೋದಲ್ಲಿ ದಾಖಲಾಗಿದೆ. ಅಲ್ಲದೆ ಕಾರ್ಪೊರೇಟರ್ ಕೂಡಾ ಮಹಿಳೆಯರೊಂದಿಗೆ ದರ್ಪದಿಂದ ಮಾತಮಾಡುವುದು ದೃಶ್ಯದಲ್ಲಿ ಕಂಡು ಬರುತ್ತದೆ. ಆದರೆ ಕಡೆಗೇ ಮಹಿಳೆಯರ ಪ್ರಶ್ನೆಗೆ ಉತ್ತರಿಸಲಾಗದೆ ಕಾರ್ಪೊರೇಟರ್ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಮಹಿಳೆಯರು ಅವರನ್ನು ಕರೆದರೂ ನಿಲ್ಲದೆ ಅವರು ಅಲ್ಲಿಂದ ತೆರಳಿದ್ದಾರೆ.