'ಮುಸ್ಲಿಂ ಧರ್ಮ ತೊರೆಯಲು ಬಯಸುತ್ತೇನೆ ಯೋಗಿ ಸರ್ ನನಗೆ ಸಹಾಯ ಮಾಡಿ' ಬಾಲಕಿಯ ವೀಡಿಯೋ ವೈರಲ್
Tuesday, July 25, 2023
ಉತ್ತರಪ್ರದೇಶ: ಇಲ್ಲಿನ ರಾಂಪುರ ನಗರದ ಬಾಲಕಿಯೊಬ್ಬಳು ಕಲೆಕ್ಟರೇಟ್‌ನಲ್ಲಿರುವ ಎಸ್‌ಪಿ ಕಚೇರಿಯ ಹೊರಗೆ ದಾಂಧಲೆ ಮಾಡಿರುವ ಘಟನೆ ನಡೆದಿದೆ. ಆಕೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
ಪತ್ರಕರ್ತ ಗೌರವ್ ಕುಶ್ವಾಹ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೋದಲ್ಲಿ ಗುಂಪಿನ ನಡುವೆ “ತಾನು ಮುಸ್ಲಿಂ ಧರ್ಮವನ್ನು ದ್ವೇಷಿಸುತ್ತೇನೆ. ನಾನು ಮುಸ್ಲಿಂ ಧರ್ಮವನ್ನು ತೊರೆಯಲು ಬಯಸುತ್ತೇನೆ ಯೋಗಿ ಆದಿತ್ಯನಾಥ್ ಸರ್, ನನಗೆ ಸಹಾಯ ಮಾಡಿ” ಎಂದು ಬಾಲಕಿ ಕೂಗುತ್ತಿರುವುದು ಕಂಡುಬರುತ್ತದೆ. ಆದರೆ ಈ ಘಟನೆ ಯಾವಾಗ ನಡೆದಿರುವುದು ಎಂದು ತಿಳಿದಿಲ್ಲ.
ವೀಡಿಯೋದಲ್ಲಿ ಕಾಣಿಸಿಕೊಂಡಿರುವ ಬಾಲಕಿ ತನ್ನ ಸಂಬಂಧಿಕರ ವಿರುದ್ಧವೂ ಗಂಭೀರ ಆರೋಪ ಮಾಡಿದ್ದಾಳೆ. ಸಂಬಂಧಿಕರು ಕೂಡ ತನ್ನನ್ನು ಶೋಷಿಸುತ್ತಿದ್ದಾರೆ ಎಂದಿದ್ದಾಳೆ. ಬಾಲಕಿ ಗದ್ದಲ ಹೆಚ್ಚಾದ ಬಳಿಕ ಪೊಲೀಸರು ಆಕೆಯನ್ನು ಹಿಡಿದು ಕರೆದೊಯ್ದಿದ್ದಾರೆ. ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಿದ ಬಳಿಕ ಬಿಡುಗಡೆ ಮಾಡಲಾಗಿದೆ.
ಸ್ಥಳೀಯ ವರದಿಗಳ ಪ್ರಕಾರ, ಬಾಲಕಿಯ ದುಃಖದ ಹಿಂದಿನ ಸತ್ಯ ಮತ್ತು ಆಕೆಯ ಆರೋಪಗಳ ಸಿಂಧುತ್ವವನ್ನು ಖಚಿತಪಡಿಸಿಕೊಳ್ಳಲು ಬರ್ಹಾಲ್ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.