ವ್ಯಕ್ತಿಯ ತಲೆ ಬೋಳಿಸಿ, ಮೂತ್ರ ವಿಸರ್ಜಿಸಿದ ತೃತೀಯ ಲಿಂಗಿಗಳು -Video
Monday, July 31, 2023
ಲಖನೌ: ವ್ಯಕ್ತಿಯೊಬ್ಬರ ತಲೆ ಬೋಳಿಸಿ, ಬಲವಂತವಾಗಿ ಮೂತ್ರ ಕುಡಿಸಿ, ಹತ್ತು ಸಾವಿರ ರೂ. ಹಣ ದೋಚಿದ ಆರೋಪದ ಮೇಲೆ ಐವರು ತೃತೀಯ ಲಿಂಗಿಗಳನ್ನು ಉತ್ತರ ಪ್ರದೇಶದ ಕಸ್‌ಗಂಜ್ ಪೊಲೀಸರು ಬಂಧಿಸಿದ್ದಾರೆ.
ಜೂ.26 ರಂದು ನಡೆದಿರುವ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ರಫೀಕ್ ಎಂಬಾತ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಐವರನ್ನು ಬಂಧಿಸಿದ್ದಾರೆ. ವೈರಲ್ ಆಗಿರುವ ವಿಡಿಯೊದಲ್ಲಿ ಒಬ್ಬ ವ್ಯಕ್ತಿಯನ್ನು ಹಿಡಿದಿರುವ ಐವರು ಆರೋಪಿಗಳು ತಲೆ ಬೋಳಿಸಿದ್ದಾರೆ. ಮತ್ತೊಬ್ಬರು ಸಂತ್ರಸ್ತನ ಬಾಯಿಗೆ ಮೂತ್ರ ವಿಸರ್ಜನೆ ಮಾಡುತ್ತಿರುವುದು ಕಂಡು ಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ ಸಂತ್ರಸ್ತ ವ್ಯಕ್ತಿ ತೃತೀಯ ಲಿಂಗಿಯೊಬ್ಬರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಇತ್ತೀಚಿಗೆ ಕೆಲಸ ಬಿಟ್ಟು ಬೇರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎನ್ನಲಾಗಿದೆ. ಇದರಿಂದ ಕೋಪಗೊಂಡಿದ್ದ ಐವರು, ರಫೀಕ್ ವಿರುದ್ಧ ಸೇಡು ತೀರಿಸಿಕೊಳ್ಳಲು ರಸ್ತೆಯಲ್ಲೇ ಹಿಡಿದು ತಲೆ ಬೋಳಿಸಿದ್ದಾರೆ.