ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಮನೆಯನ್ನು ಖರೀದಿಸಿದ ಭಾರತೀಯ ಮೂಲದ ಕುಟುಂಬ: ಇದರ ಬೆಲೆ ಕೇಳಿದ್ರೆ ಯಾರಾದ್ರೂ ದಂಗಾಗೋದು ಖಂಡಿತಾ
Saturday, July 1, 2023
ಸ್ವಿಟ್ಟರ್ಲೆಂಡ್: ಭಾರತೀಯ ಮೂಲದ ಕುಟುಂಬ ಸ್ವಿಟ್ಟರ್ಲೆಂಡ್‌ನಲ್ಲಿ ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಮನೆಯನ್ನು ಖರೀದಿಸಿರುವ ಸುದ್ದಿ ತಿಳಿದು ಬಂದಿದೆ. ಈ ಐಷಾರಾಮಿ ವಿಲ್ಲಾದ ಬೆಲೆ ಕೇಳಿ ಎಲ್ಲರೂ ಆಶ್ಚರ್ಯ ಪಟ್ಟಿದ್ದಾರೆ. ಸದ್ಯ ಮನೆಯ ಫೋಟೋ/ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಭಾರತೀಯ ಮೂಲದ ದಂಪತಿ ಪಂಕಜ್ ಓಸ್ವಾಲ್ ಹಾಗೂ ರಾಧಿಕಾ ಓಸ್ವಾಲ್ ಸ್ವಿಟ್ಸರ್ಲೆಂಡ್ ಜಿಂಗಿನ್ಸ್ ಹಳ್ಳಿಯಲ್ಲಿ ವಿಶ್ವಂತ ಅತ್ಯಂತ ದುಬಾರಿ ಮನೆಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ. ದಂಪತಿಗೆ ವಸುಂಧರಾ ಓಸ್ವಾಲ್ ಮತ್ತು ರಿದಿ ಓಸ್ವಾಲ್ ಎಂಬ ಇಬ್ಬರು ಮಕ್ಕಳಿದ್ದಾರೆ. ಮಣಿಪುರದಲ್ಲಿ ಶಿಕ್ಷಣ ಪಡೆದ ಪಂಕಜ್ ಓಸ್ವಾಲ್ ಬಳಿಕ ತಮ್ಮ ಕುಟುಂಬದೊಂದಿಗೆ 2013ರಿಂದ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರು. ಕಳೆದ 10 ವರ್ಷಗಳಿಂದ ಸ್ವಿಟ್ಸರ್ಲೆಂಡ್‌ನಲ್ಲಿ ವಾಸವಿದ್ದ ಈ ಕುಟುಂಬ ಇದೀಗ ಅಲ್ಲಿನ ಜಿಂಗಿನ್ಸ್ ನ ಅತ್ಯಂತ ಸುಂದರ ಹಳ್ಳಿಯಲ್ಲಿ ಕೋಟ್ಯಂತರ ರೂ.ನಲ್ಲಿ ಮನೆಯೊಂದನ್ನು ಖರೀದಿಸಿದೆ.
ಜಿಂಗಿನ್ ಹಳ್ಳಿಯಲ್ಲಿರುವ ಈ ಮನೆ ವಿಶ್ವದ ಟಾಪ್-10 ದುಬಾರಿ ಮನೆಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ. 4.3 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಮನೆಯನ್ನು ಬರೋಬ್ಬರಿ 1649 ಕೋಟಿ ರೂ. ನೀಡಿ ಪಂಕಜ್ ಓಸ್ವಾಲ್ ದಂಪತಿ ಖರೀದಿಸಿದ್ದಾರೆ. ಈ ನಿವಾಸದ ಸುತ್ತಲೂ ಸ್ವಿಟ್ಟರ್ಲೆಂಡ್‌ನ ಪ್ರಕೃತಿ ಸೌಂದರ್ಯ ಕಣ್ಣಿಗೆ ಕಟ್ಟುವಂತಿದ್ದು, ಹಿಮಾವೃತ ಬೆಟ್ಟವನ್ನು ಕುಳಿತಲ್ಲಿಂದಲೇ ಸವಿಯಬಹುದು.
ಗ್ರೀಕ್ ಹಡಗು ನಿರ್ಮಿಸಿದ್ದ ಮ್ಯಾಗ್ನೆಟ್ ಅರಿಸ್ಟಾಟಲ್ ಒನಾಸಿಸ್ ಅವರ ಮಗಳು ಕ್ರಿಸ್ಟಿನಾ ಒನಾಸಿಸ್ ಈ ಹಿಂದೆ ಇದೇ ಮನೆಯನ್ನು ಖರೀದಿಸಿದ್ದರು. ಒಬೆರಾಯ್ ರಾಜ್‌ಲಾಸ್, ಲೀಲಾ ಪ್ಯಾಲೆಸ್ ಹೋಟೆಲ್‌ಗಳನ್ನು ವಿನ್ಯಾಸಗೊಳಿಸಿದ ಖ್ಯಾತ ಇಂಟೀರಿಯರ್ ಡಿಸೈನರ್ ಜೆಫ್ರಿ ವಿಲ್ಸ್ ಈ ಮನೆಯನ್ನು ಇದೀಗ ಮರುನವೀಕರಣ ಮಾಡಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಮೂಲದ ಬಿಲಿಯನೇರ್ ಪಂಕಜ್ ಓಸ್ವಾಲ್ ಆಗೋ ಮಿಲ್ಫ್ ಮತ್ತು ಓಸ್ವಾಲ್ ಗ್ರೀನ್‌ಟೆಕ್‌ನ ಸಂಸ್ಥಾಪಕ ಕೈಗಾರಿಕೋದ್ಯಮಿ ಅಭಯ್ ಕುಮಾರ್ ಓಸ್ವಾಲ್ ರವರ ಪುತ್ರ. ಸದ್ಯ ಪಂಕಜ್ ಓಸ್ವಾಲ್ ನೇತೃತ್ವದ ಓಸ್ವಾಲ್ ಗ್ರೂಪ್ ಗ್ಲೋಬಲ್, ಪೆಟ್ರೋಕೆಮಿಕಲ್ಸ್, ರಿಯಲ್ ಎಸ್ಟೇಟ್, ರಸಗೊಬ್ಬರ ಮತ್ತು ಗಣಿಗಾರಿಕೆಯಲ್ಲಿ ವ್ಯವಹಾರ ಹೊಂದಿದೆ.