ಕಾಸರಗೋಡು- 12 ರ ಬಾಲಕಿಗೆ ಲೈಂಗಿಕ ಕಿರುಕುಳ- ಆರೋಪಿಗೆ 97 ವರ್ಷ ಶಿಕ್ಷೆ !
Friday, August 18, 2023
ಕಾಸರಗೋಡು,: 12 ಹರೆಯದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಸಂಬಂಧಿ ಯುವಕನಿಗೆ 97 ವರ್ಷ ಸಜೆ ಹಾಗೂ 8.30 ಲಕ್ಷರೂ. ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ(1) ತೀರ್ಪು ನೀಡಿದೆ.
ಮಂಜೇಶ್ವರ ಕುಂಜತ್ತೂರು ಉದ್ಯಾವರದ ಸಯ್ಯದ್ ಮುಹಮ್ಮದ್ ಬಶೀರ್ (41) ಶಿಕ್ಷೆಗೊಳಗಾದ ಅಪರಾಧಿ. ಕಾಸರಗೋಡು ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ವರ್ಷ ಸಜೆ ವಿಧಿಸಿದ ತೀರ್ಪು ಇದಾಗಿದೆ. ಕೇರಳ ರಾಜ್ಯದಲ್ಲಿ ದ್ವಿತೀಯ ಅತ್ಯಂತ ಹೆಚ್ಚು ವರ್ಷ ಸಜೆಯಾಗಿದೆ. ಪತ್ತನಂತಿಟ್ಟದಲ್ಲಿ ಪೋಕ್ಸೋ ಪ್ರಕರಣದಲ್ಲಿ 104 ವರ್ಷ ಸಜೆ ವಿಧಿಸಲಾಗಿತ್ತು. ಅದು ಅತ್ಯಂತ ಹೆಚ್ಚು ವರ್ಷ ಸಜೆ ನೀಡಿದ ಪ್ರಕರಣವಾಗಿತ್ತು.