12 ವರ್ಷದ ಮಗಳ ಮೇಲೆ ಅತ್ಯಾಚಾರ: ತಂದೆ ಸೆರೆ
Wednesday, August 2, 2023
ಬೀದರ್: 12 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆಸಿದ ಆರೋಪದಡಿ ಪಾಪಿ ತಂದೆಯನ್ನು ಬಸವಕಲ್ಯಾಣ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಲಾಕ್‌ಡೌನ್ ವೇಳೆ ಶಾಲೆಗೆ ರಜೆ ಘೋಷಿಸಿದ ನಂತರ ಮನೆಯಲ್ಲಿ ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿ, ಯಾರಿಗೂ ವಿಷಯ ಹೇಳದಂತೆ ಬೆದರಿಕೆಯೊಡ್ಡಿದ್ದನು.
ನಂತರ ಹಲವು ಸಲ ಅತ್ಯಾಚಾರ ಎಸಗಿದ್ದಾನೆ. ಇತ್ತೀಚೆಗೆ ಹಗಲಿನಲ್ಲೇ ಅತ್ಯಾಚಾರ ಮಾಡುವಾಗ ಬಾಲಕಿಯ ಅಜ್ಜಿಗೆ ವಿಷಯ ಗೊತ್ತಾಗಿ, ಪ್ರಕರಣ ಬಹಿರಂಗಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.