ಹಿಜಾಬ್ ಸರಿಯಾಗಿ ಧರಿಸದ 14 ವಿದ್ಯಾರ್ಥಿನಿಯರ ತಲೆ ಬೋಳಿಸಿದ ಶಿಕ್ಷಕಿ
Tuesday, August 29, 2023
ಇಂಡೋನೇಷ್ಯಾ: ಇಲ್ಲಿನ ಶಾಲೆಯೊಂದರ ಹನ್ನೆರಡಕ್ಕೂ ಅಧಿಕ ವಿದ್ಯಾರ್ಥಿನಿಯರ ತಲೆಯನ್ನು ಶಿಕ್ಷಕಿ ಅರೆ ಬೋಳಿಸಿದ್ದಾಳೆ. ವಿದ್ಯಾರ್ಥಿನಿಯರು ಹಿಜಾಬ್ ಅನ್ನು ತಪ್ಪಾಗಿ ಧರಿಸುತ್ತಿದ್ದಾರೆಂಬ ಕಾರಣಕ್ಕೆ ಈ ಘಟನೆ ನಡೆದಿದೆ.
ಘಟನೆಯ ಬಳಿಕ ಇಂಡೋನೇಷ್ಯಾದ ಸಂಪ್ರದಾಯವಾದಿ ಪ್ರದೇಶಗಳಲ್ಲಿ ಮುಸ್ಲಿಂ ಮತ್ತು ಮುಸ್ಲಿಮೇತರ ಹುಡುಗಿಯರಿಗೆ ಕಡ್ಡಾಯವಾದ ಡ್ರೆಸ್ ಕೋಡ್‌ಗಳು, ವಿಶೇಷವಾಗಿ ಹಿಜಾಬ್‌ನ ಸುತ್ತ ನಡೆಯುತ್ತಿರುವ ಚರ್ಚೆ ಬೆಳಕಿಗೆ ತಂದಿದೆ. ಪೂರ್ವ ಜಾವಾದ ಲಾಮೊಂಗನ್ ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಜೂನಿಯರ್ ಹೈಸ್ಕೂಲ್ SMPN 1 ನಲ್ಲಿ ಈ ಘಟನೆ ನಡೆದಿದೆ. 14 ಮುಸ್ಲಿಂ ಹುಡುಗಿಯರಿಗೆ ಶಿಕ್ಷಕಿ ಕಳೆದ ಬುಧವಾರ ಕೂದಲನ್ನು ಅರೆ ಬೋಳಿಸಿದ್ದಾರೆ. ಘಟನೆಯ ಬಳಿಕ ಮುಖ್ಯೋಪಾಧ್ಯಾಯರು ಸಂಬಂಧಪಟ್ಟ ಶಿಕ್ಷಿಯನ್ನು ಅಮಾನತುಗೊಳಿಸಿದ್ದಾರೆ. ಅಲ್ಲದೆ ಬಾಲಕಿಯರ ಪೋಷಕರ ಬಳಿ ಕ್ಷಮೆಯಾಚಿಸಿದೆ ಎಂದು ಬಹಿರಂಗಪಡಿಸಿದ್ದಾರೆ.
ಘಟನೆಗೆ ಮೂಲ ಕಾರಣವೆಂದರೆ ಹುಡುಗಿಯರು ಸ್ಕಾರ್ಫ್‌ಗಳ ಕೆಳಗೆ ಒಳ ಟೋಪಿಗಳನ್ನು ಧರಿಸದಿದ್ದರಿಂದ ಅವರ ಕೂದಲು ಗೋಚರಿಸುತ್ತಿತ್ತು. ವಿದ್ಯಾರ್ಥಿನಿಯರಿಗೆ ಹಿಜಾಬ್‌ಗಳನ್ನು ಧರಿಸಲು ಯಾವುದೇ ಕಡ್ಡಾಯ ನಿಯಮ ಇಲ್ಲ. ಆದರೆ ಅಚ್ಚುಕಟ್ಟಾಗಿ ಕಾಣಿಸಿಕೊಳ್ಳಲು ಕ್ಯಾಪ್‌ಗಳನ್ನು ಧರಿಸಲು ಸಲಹೆ ನೀಡಲಾಗುತ್ತಿತ್ತು. ಈ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಮುಖ್ಯೋಪಾಧ್ಯಾಯರು, ಪೋಷಕರೊಂದಿಗೆ ಮಧ್ಯಸ್ಥಿಕೆ ಮಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಬೆಂಬಲವನ್ನು ನೀಡಲು ಬದ್ಧರಾಗಿದ್ದೇವೆ ಎಂದು ಹೇಳಿರುವುದು ವರದಿಯಾಗಿದೆ.