ಬೆತ್ತಲೆ ಸೀನ್ ಗಾಗಿ 16 ಗಂಟೆಗಳ ಶೂಟಿಂಗ್: ಆದೈ ತಮಿಳು ಸಿನಿಮಾದ ಬಗ್ಗೆ ಸಿನಿಮಾಟೊಗ್ರಾಫರ್ ಹೇಳಿದ್ದೇನು ಗೊತ್ತೇ
Tuesday, August 29, 2023
ಚೆನ್ನೈ: ಬಹುಭಾಷಾ ನಟಿ ಅಮಲಾ ಪೌಲ್ ಪರಿಚಯ ನಟ ಕಿಚ್ಚ ಸುದೀಪ್ ಅಭಿನಯದ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಇದ್ದೇ ಇರುತ್ತದೆ. ನೀಲತಾಮರನ್ ಹೆಸರಿನ ಮಲಯಾಳಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕೇರಳ ಮೂಲದ ನಟಿ ಅಮಲಾ ಅದೃಷ್ಟ ಕಾಲಿವುಡ್ನ “ಮೈನಾ” ಚಿತ್ರದ ಬಳಿಕ ಸಂಪೂರ್ಣ ಬದಲಾಯಿತು. ವಿಜಯ್, ವಿಕ್ರಮ್, ಸೂರ್ಯ, ಆರ್ಯ, ಜಯಂ ರವಿ, ಧನುಷ್ ಸೇರಿದಂತೆ ಕಾಲಿವುಡ್ ಸೂಪರ್ಸ್ಟಾರ್ಗಳ ಜೊತೆ ನಟಿಸಿದ್ದಾರೆ.
ಇದೀಗ ಅಮಲಾ ಪೌಲ್ ಬಗೆಗಿನ ಹೊಚ್ಚಹೊಸ ಸುದ್ದಿಯೆಂದರೆ, ಸಿನಿಮಾಟೋಗ್ರಾಫರ್ ಒಬ್ಬರು ಅಮಲಾ ಪೌಲ್ ಅವರ ಬೆತ್ತಲೆ ದೃಶ್ಯದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ತಮಿಳಿನ ಆದೈ ಸಿನಿಮಾದಲ್ಲಿ ಅಮಲಾ ಪೌಲ್ ಬೆತ್ತಲೆಯಾಗಿ ನಟಿಸಿದ್ದಾರೆ. ಇದರ ಬಗ್ಗೆ ಚಿತ್ರದ ಕ್ಯಾಮರಾಮೆನ್ ವಿಜಯ್ ಕಾರ್ತಿಕ್ ಕಣ್ಣನ್ ಅವರು ಯೂಟ್ಯೂಬ್ ಚಾನೆಲ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ
ಆದೈ ಸಿನಿಮಾದ ನಗ್ನ ದೃಶ್ಯವನ್ನು ಚಿತ್ರೀಕರಿಸುವುದು ನಮಗೆ ಬಹಳ ಚಾಲೆಂಜಿಂಗ್ ಆಗಿತ್ತು. ಅಶ್ಲೀಲ ವಿಷಯಗಳು ಬರದಂತೆ ಬಹಳ ಎಚ್ಚರ ವಹಿಸಿದ್ದೆವು. ಒಂದು ದೃಶ್ಯದಲ್ಲಿ ಅಮಲಾ ಪೌಲ್ ಶರ್ಟ್ ಹಾಕದೆ ಕುಳಿತಿದ್ದಾರೆ. ಆದರೆ, ಆ ದೃಶ್ಯದಲ್ಲಿ ಎಲ್ಲಿಯೂ ಅಶ್ಲೀಲತೆಯ ಸುಳಿವೂ ಇಲ್ಲ. ಇದಕ್ಕಾಗಿ ನಾವು ಸುಮಾರು 16 ಗಂಟೆಗಳ ಕಾಲ ಆ ದೃಶ್ಯವನ್ನು ಚಿತ್ರೀಕರಿಸಿದ್ದೇವೆ ಮತ್ತು ಚಿತ್ರೀಕರಣದ ಸಮಯದಲ್ಲಿ ನಾನು, ನಿರ್ದೇಶಕ, ಟ್ರಾಲಿ ಆಪರೇಟರ್, ಕ್ಯಾಮ್ ಆಪರೇಟರ್ ಮತ್ತು ನನ್ನ ಸಹಾಯಕ ಸೇರಿದಂತೆ ಒಟ್ಟು 9 ಜನರು ಮಾತ್ರ ಇದ್ದೆವು ಎಂದು ವಿಜಯ್ ಕಾರ್ತಿಕ್ ತಿಳಿಸಿದ್ದಾರೆ.
ಶೂಟಿಂಗ್ ಸಮಯದಲ್ಲಿ ಅಮಲಾ ಪೌಲ್ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕುಗ್ಗದಂತೆ ಬಹಳ ಎಚ್ಚರ ವಹಿಸಿದ್ದೇವೆ. ಒಂದು ವೇಳೆ ಅಮಲಾ ಬೆತ್ತಲೆಯಾಗಿ ನಟಿಸಲು ಒಪ್ಪದೇ ಇದ್ದಿದ್ದರೆ ಸಿನಿಮಾ ಮಾಡುತ್ತಿರಲಿಲ್ಲ ಎಂದು ಹೇಳಿದರು.
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಅಮಲಾ ಅವರು ಪ್ರಸ್ತುತ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರ್ ಅವರ ಆಡಿಜೀವಿಥಂ ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈ ಸಿನಿಮಾವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ಬ್ಲಸ್ಸಿ ಅವರು ನಿರ್ದೇಶಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಕೆಲ ತಿಂಗಳ ಹಿಂದಷ್ಟೇ ಈ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದರಲ್ಲಿ ಪೃಥ್ವಿರಾಜ್ ಮತ್ತು ಅಮಲಾ ನಡುವೆ ಲಿಪ್ಲಾಕ್ ದೃಶ್ಯವಿದೆ. ನಿಜವಾಗಿಯೂ ಲಿಪ್ಲಾಕ್ ಮಾಡಿರುವಂತೆ ನೈಜವಾಗಿ ಅಭಿನಯಿಸಿದ್ದಾರೆ. ಅಲ್ಲದೆ, ಈ ಲಿಪ್ಲಾಕ್ ದೃಶ್ಯದ ಬಗ್ಗೆ ಅಮಲಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ತುಂಬಾ ಬೋಲ್ಡ್ ಹೇಳಿಕೆ ನೀಡಿದ್ದರು.
ಈ ಸಿನಿಮಾಗೂ ನಾನು ಸಹಿ ಮಾಡುವ ಮುನ್ನ ಲಿಪ್ಲಾಕ್ ಇರುತ್ತದೆ ಎಂದು ನಿರ್ದೇಶಕರು ನನಗೆ ಹೇಳಿದರು. ನಾನು ಈ ಮುಂಚೆಯೇ ಓಕೆ ಎಂದಿದ್ದೆ. ಆ ದೃಶ್ಯಕ್ಕೆ ಲಿಪ್ಲಾಕ್ ಅವಶ್ಯಕತೆ ಇತ್ತು. ಹೀಗಾಗಿ ನಾನು ಮಾಡಿದೆ. ಇಷ್ಟೇ ಅಲ್ಲದೆ, ಕತೆ ಪೂರಕವಾಗಿದ್ದರೆ, ನಾನು ಬೆತ್ತಲೆಯಾಗಿ ನಟಿಸಲೂ ಕೂಡ ರೆಡಿ. ನಾನಿದನ್ನು ಈ ಹಿಂದೆಯೂ ಹೇಳಿದ್ದೇನೆ. ಬೆತ್ತಲೆಯಾಗಿಯೇ ನಟಿಸಲು ರೆಡಿಯಾಗಿರುವಾಗ ಈ ಲಿಪ್ಲಾಕ್ ದೃಶ್ಯವಲ್ಲ ಕಷ್ಟವೇ ಅಲ್ಲ ಎಂದು ಅಮಲಾ ಬೋಲ್ಡ್ ಹೇಳಿಕೆ ನೀಡಿದ್ದರು