ಆಗಷ್ಟ್ 26 ರಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಲ್ಲಿ ಬೃಹತ್ ಉದ್ಯೋಗಮೇಳ
Thursday, August 24, 2023
ಶ್ರೀ ಗೋಕರ್ಣಾನಾಥೇಶ್ವರ ಕಾಲೇಜು, ಮಂಗಳೂರು, ಬಿ.ಇ. ಡಬ್ಲ್ಯು, ಎಸ್ (ರಿ), ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು ಮತ್ತು ಯು.ಎನ್.ಡಿ.ಪಿ ಎಸ್.ಎ.ಜಿ. ಪ್ರೋಜೆಟ್ ಕೂಡ ಉನ್ನತ್ತಿ, ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಶ್ರೀ ಗೋಕರ್ಣನಾಥೇಶ್ವರ ಕಾಲೇಜು, ಗಾಂಧಿನಗರ, ಮಂಗಳೂರು ಇಲ್ಲಿ ಆಗಸ್ಟ್ 26 ರಂದು ಉದ್ಯೋಗ ಮೇಳ ಆಯೋಜಿಸಿವೆ
ಈ ಬೃಹತ ಉದ್ಯೋಗ ಮೇಳದ ಉದ್ಘಾಟನೆಯನ್ನು ಅಶೋಕ ಕುಮಾರ, ಅಧ್ಯಕ್ಷರು, ಬಿ.ಇ., ಡಬ್ಲ್ಯುಎಸ್ (ರಿ) ಇವರು ನೇರವೇರಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರಾಜೇಶ್ ಬಿ. ಅಧ್ಯಕ್ಷರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು, ವಹಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕಾಲೇಜಿನ ಸಂಚಾಲಕಾರದ ವಸಂತ, ಕಾರಂದೂರು, ಮಹೇಶ ಕುಮಾರ್, ಎ.ಸಿ.ಪಿ ಕೇಂದ್ರ ಉಪ ವಿಭಾಗ - ಬಂದರು, ಮಂಗಳೂರು ಭಾಗವಹಿಸಲಿದ್ದು, ಡಾ|| ಆಶಾಲತಾ ಸುವರ್ಣ, ಪಾಂಶುಪಾಲರು. ಶ್ರೋ ಗೋಕರ್ಣನಾಥೇಶ್ವರ ಕಾಲೇಜು, ಮಂಗಳೂರು, ನವನಂದ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ, ನಿರ್ದೇಶಕರು, ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು. ಶಿವಕುಮಾರ್ ಸ್ವಾಮಿ ಕೆ. ಎಂ. ಯು.ಎನ್.ಡಿ.ಪಿ ಜಿಲ್ಲಾ ಸಂಯೋಜಕರು, ದ.ಕ - ಜಿಲ್ಲೆ, ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಸುಮಾರು 50 ಕಂಪೆನಿಗಳು, 500 ಕ್ಕು ಅಧಿಕ ಹುದ್ದೆಗಳು
ಒಂದು ದಿನ ಈ ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 50ಕ್ಕು ಅಧಿಕ ಕಂಪನಿಗಳು ಭಾಗವಹಿಸಲಿದ್ದು ಸುಮಾರು 500ಕ್ಕು ಅಧಿಕ ಹುದ್ದೆಗಳಿಗೆ ಅರ್ಹರ ನೇಮಕಾತಿ ನಡೆಯಲಿದೆ. ದ. ಕ. ಉಡುಪಿ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಪದವಿ, ಸ್ನಾತಕೋತ್ತರ ಪದವಿ ಐ.ಟಿ.ಐ, ಡಿಪ್ಲೋಮಾ, ಇಂಜಿನಿಯರಿಂಗ್, ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಉದ್ಯೋಗದ ನೇರ ಸಂದರ್ಶನ ನಡೆಯಲಿದೆ.
ಸ್ಥಳದಲ್ಲೇ ನೋಂದಣಿಗೂ ಅವಕಾಶ
ಉದ್ಯೋಗಾಕಾಂಕ್ಷಿಗಳು ಸ್ಥಳದಲ್ಲೇ ಹೆಸರು ನೋಂದಾಯಿಸಿಕೊಳ್ಳಲೂ (Walk in interview) ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಸಂದರ್ಶನಕ್ಕೆ ಬರುವಾಗ ಬಯೋಡಾಟ, ಆಧಾರ್ ಕಾರ್ಡ್, ಪಾಸ್ಪೋರ್ಟ್ ಅಳತೆಯ ಫೋಟೋ, ಎಸ್.ಎಸ್.ಎಲ್.ಸಿ ಅಂಕಪಟ್ಟಿಯ ಜೊತೆಗೆ ಗರಿಷ್ಠ ಅರ್ಹತೆಯ ಅಂಕಪಟ್ಟಿಯ ಪ್ರತಿಗಳನ್ನು ತರಬೇಕು, ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ ಓದುತ್ತಿರುವವರೂ ಸಂದರ್ಶನಕ್ಕೆ ಹಾಜರಾಗಬಹುದು.
ಪ್ರಮುಖ ಕಂಪನಿಗಳು
ಆಕ್ಸಿಸ್ ಬ್ಯಾಂಕ್, ಹೆಚ್ಡಿಎಫ್ಸಿ ಬ್ಯಾಂಕ್, ಐ.ಸಿ.ಐ.ಸಿ ಬ್ಯಾಂಕ್, ಮುತ್ತೂಟ್ ಫೈನಾನ್ಸ್, ಆಧಿತ್ಯಾ ಬಿರ್ಲಾ ಗ್ರೂಪ್, ವಿನ್ ಮ್ಯಾನ್ ಸಾಪ್ಟ್ ವೇರ್, ಭಾರತ್ ಆಟೋ ಕಾರ್ಸ್, ಮಾಂಡೋವಿ ಮೋಟರ್ಸ್, ಮ್ಯಾಕ್ ಲೈಪ್ ಇಂನ್ಸೂರನ್, ಬ್ರರ್ಜರ್ ಪೇಟ್ಸ್, ಕೋಜೆಂಟ್, ಜ್ವಾಸ್ ಅಲೂಕಾಸ್, ಜೇಸ್ಟ್ ಡೈಲ್, ಮೆಡಿಪ್ಲಸ್, ಸೇರಿದಂತೆ 50ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸಲಿವೆ.
ಹೆಚ್ಚಿನ ಮಾಹಿತಿಗಾಗಿ ಮಿಥುನ್ ಚಂದ್ರ - 9916063118 ಶ್ರೀ ನವನಂದ - 9740101806 ಸಂಪರ್ಕಿಸುವಂತೆ ಕೋರಲಾಗಿದೆ